
Official account of the Deputy Commissioner of Police, Whitefield Division, Bengaluru City | in case of emergency #DialNamma112
Bengaluru, India
Joined February 2017
- Tweets4.1K
- Following127
- Followers22.9K
- Likes1.4K
Pinned Tweet
ನಾನು ಶ್ರೀಹರಿ ಬಾಬು, ಐಪಿಎಸ್, ವೈಟ್ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ವಿಭಾಗದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಸಾರ್ವಜನಿಕರು ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಅಥವಾ ಸಂಶಯಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಹಾಗೂ ಪೊಲೀಸ್ ಸಹಾಯಕ್ಕಾಗಿ 112 ಗೆ ಕರೆ ಮಾಡುವಂತೆ ಮನವಿ ಮಾಡುತ್ತೇನೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಕೈಜೋಡಿಸಬೇಕಾಗಿ ವಿನಂತಿಸುತ್ತೇನೆ.
I am Srihari Babu, IPS, and have assumed charge as the Deputy Commissioner of Police, Whitefield Division. Maintaining peace and law and order, preventing crime, and ensuring public safety will be our top priorities.
I urge the public to promptly inform the police about any unlawful activities or suspicious incidents and call **112** for police assistance. I request all citizens to extend their cooperation and join hands with the police department in maintaining peace and public order.
@BlrCityPolice
@DgpKarnataka
**ವೈಟ್ಫೀಲ್ಡ್ ಉಪವಿಭಾಗದ ಪೊಲೀಸ್ ಠಾಣೆಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಮತ್ತು ಪರಿಶೀಲನೆ**
ಇಂದು ಡಾ. ಹರ್ಷ ಪಿ.ಎಸ್., ಐಪಿಎಸ್., ಮಾನ್ಯ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ಹಾಗೂ ಶ್ರೀ ಶ್ರೀಹರಿ ಬಾಬು, ಬಿ.ಎಲ್., ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು ವೈಟ್ಫೀಲ್ಡ್ ಉಪವಿಭಾಗದ ಪೊಲೀಸ್ ಠಾಣೆಗಳಾದ ವರ್ತೂರು, ವೈಟ್ಫೀಲ್ಡ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ, ಬಾಕಿ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸುವುದು ಹಾಗೂ ಸಾರ್ವಜನಿಕರಿಂದ ಸ್ವೀಕರಿಸಲಾದ ದೂರುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಕುರಿತು ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
**Whitefield Division | Bengaluru City Police in english**
**Senior Police Officers Visit and Inspect Police Stations in Whitefield Sub-Division**
Today, Dr. Harsha P.S., IPS, Commissioner of Police, East, Bengaluru City, along with Shri Srihari Babu B.L., IPS, Deputy Commissioner of Police, Whitefield Division, visited and inspected Varthur, Whitefield and Kadugodi Police Stations under Whitefield Sub-Division.
During the visit, they reviewed the maintenance of law and order, crime prevention, expeditious investigation of pending cases, and timely disposal of public grievances. They also provided necessary guidance and instructions to the concerned officers.
Police officers and staff of the Sub-Division were present during the visit.
**Whitefield Division | Bengaluru City Police**
@BlrCityPolice
DCP Whitefield Bengaluru retweeted
ಬೆಂಗಳೂರು ನಗರ ದಕ್ಷಿಣ ವಿಭಾಗದ ಆಡುಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಹಗಲು ವೇಳೆ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಒಟ್ಟು 447 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ವಶಪಡಿಸಿಕೊಳ್ಳಲಾದ ಒಟ್ಟು ಸ್ವತ್ತುಗಳ ಅಂದಾಜು ಮೌಲ್ಯ ₹57 ಲಕ್ಷ ಆಗಿರುತ್ತದೆ.
ಆಡುಗೋಡಿ ಪೊಲೀಸ್ ಠಾಣೆಯ ತಂಡದ ಈ ಕರ್ತವ್ಯ ನಿಷ್ಠೆ ಹಾಗೂ ದಕ್ಷ ಕಾರ್ಯವೈಖರಿಯು ಪ್ರಶಂಸನೀಯವಾಗಿದೆ.
Swift action by Adugodi Police Station, Bengaluru City South Division, has led to the arrest of two persons involved in a daytime house burglary.
The police recovered 447 grams of gold jewellery and seized one two-wheeler, with the total value of the seized property amounting to ₹57 lakh.
Commendable work by the Adugodi Police team.
#SouthBengaluruPolice #BengaluruCityPolice #PublicSafety #pressconference
@BlrCityPolice @CCP_Blr @Vamsikrishnaips @KarnatakaCops
🤖 Made with AI
🚔 ಬೆಂಗಳೂರು ನಗರ ಪೊಲೀಸ್ – ವೈಟ್ಫೀಲ್ಡ್ ವಿಭಾಗ
ಸಾರ್ವಜನಿಕರ ಮಾಹಿತಿಗಾಗಿ ವೈಟ್ಫೀಲ್ಡ್ ವಿಭಾಗದ ಪೊಲೀಸ್ ಆಡಳಿತ ವ್ಯವಸ್ಥೆ, ಉಪವಿಭಾಗಗಳು ಹಾಗೂ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವರಗಳನ್ನು ಪ್ರಕಟಿಸಲಾಗಿದೆ.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ – ಸಾರ್ವಜನಿಕ ಸೇವೆಯೇ ನಮ್ಮ ಕರ್ತವ್ಯ.
ಉಪ ಪೊಲೀಸ್ ಆಯುಕ್ತರು,
ವೈಟ್ ಫೀಲ್ಡ್ ವಿಭಾಗ,
ಬೆಂಗಳೂರು ನಗರ.
🚔 Bengaluru City Police – Whitefield Division
For public information, the administrative structure, subdivisions, and jurisdiction details of police stations under Whitefield Division are hereby shared.
Your Safety Is Our Priority – Public Service Is Our Duty.
Deputy Commissioner of Police, Whitefield Division, Bengaluru City.
#BengaluruCityPolice #WhitefieldDivision
@BlrCityPolice
🚔 **ವೈಟ್ಫೀಲ್ಡ್ ವಿಭಾಗ – ಪೊಲೀಸ್ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಠಾಣೆಗಳ ವ್ಯಾಪ್ತಿ**
ಕರ್ನಾಟಕ ಸರ್ಕಾರದ ಆದೇಶದಂತೆ ರಚಿಸಲಾಗಿರುವ ಹೊಸ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಅನುಕೂಲಕ್ಕಾಗಿ ವೈಟ್ಫೀಲ್ಡ್ ವಿಭಾಗದ ಪೊಲೀಸ್ ಆಡಳಿತ ವ್ಯವಸ್ಥೆ, ಉಪವಿಭಾಗಗಳು ಹಾಗೂ ಅವುಗಳ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಇದರೊಂದಿಗೆ, ಸಾರ್ವಜನಿಕರು ಸಂಬಂಧಪಟ್ಟ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಅಧಿಕೃತ ಮೊಬೈಲ್ ಸಂಖ್ಯೆಗಳು ಮತ್ತು ಇ-ಮೇಲ್ ವಿಳಾಸಗಳ ಮಾಹಿತಿಯನ್ನೂ ಒದಗಿಸಲಾಗಿದೆ.
ತಮ್ಮ ಪ್ರದೇಶದ ಪೊಲೀಸ್ ಠಾಣೆಯು ಯಾವ ಉಪವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಆಡಳಿತ ವ್ಯವಸ್ಥೆ ಮತ್ತು ಸಂಪರ್ಕ ವಿವರಗಳ ಕುರಿತು ಸಾರ್ವಜನಿಕರು ಸುಲಭವಾಗಿ ಮಾಹಿತಿ ಪಡೆಯಲು ಈ ಪ್ರಕಟಣೆ ಸಹಕಾರಿಯಾಗಲಿದೆ.
**ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ಸಾರ್ವಜನಿಕರ ಸೇವೆ ನಮ್ಮ ಕರ್ತವ್ಯ.**
**ಉಪ ಪೊಲೀಸ್ ಆಯುಕ್ತರು**
ವೈಟ್ಫೀಲ್ಡ್ ವಿಭಾಗ
ಬೆಂಗಳೂರು ನಗರ ಪೊಲೀಸ್
#BengaluruCityPolice #WhitefieldDivision #PoliceForPublic #PublicAwareness #YourSafetyOurPriority
@BlrCityPolice
ದಿನಾಂಕ: 19-11-2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ವರ್ತೂರು ಪೊಲೀಸ್ ಠಾಣೆಯ ಹೊಯ್ಸಳ-225 ವಾಹನಕ್ಕೆ 112 ಸಹಾಯವಾಣಿ ಮೂಲಕ ದೂರು ಸಂಖ್ಯೆ 95429 ಸ್ವೀಕೃತವಾಗಿತ್ತು.
ದೂರಿನ ಮೇರೆಗೆ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್ಐ ನಂಜುಂಡೇಶ್ವರ ರವರು ಬಾಗಲೂರು ಗ್ರಾಮದ ಶೋಭಾ ಡ್ರೀಮ್ ಏಕರ್ಸ್ ಅಪಾರ್ಟ್ಮೆಂಟ್ ಸಮೀಪದ ಖಾಲಿ ಜಾಗದಲ್ಲಿರುವ ಕಾರ್ಮಿಕರ ಶೆಡ್ಗಳ ಬಳಿ ತೆರಳಿ, ದೂರುದಾರರನ್ನು ಸಂಪರ್ಕಿಸಿ, ಅನುಮಾನಾಸ್ಪದವಾಗಿ ಕಂಡುಬಂದ ಐದು ಜನರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದರು.
ವಿಚಾರಣೆ ಸಂದರ್ಭದಲ್ಲಿ ಸದರಿ ಐದು ಜನರ ಪೈಕಿ **ಮೊಹಮ್ಮದ್ ಬಾಬುಲ್ ಶೇಕ್** ಎಂಬ ಒಬ್ಬ ವ್ಯಕ್ತಿ ಮಾತ್ರ ಬಾಂಗ್ಲಾದೇಶದ ಪ್ರಜೆಯಾಗಿರುವುದು ತಿಳಿದುಬಂದಿರುತ್ತದೆ. ಅವರ ಪಾಸ್ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ದಾಖಲೆಗಳ ನೈಜತೆಯನ್ನು ದೃಢೀಕರಿಸಿಕೊಂಡ ನಂತರ ಅವರನ್ನು ಕಾನೂನುಬದ್ಧವಾಗಿ ಬಿಡುಗಡೆಗೊಳಿಸಲಾಗಿದೆ.
ಉಳಿದ ನಾಲ್ವರು ಅಸ್ಸಾಂ ರಾಜ್ಯದ ಬಾರ್ಪೇಟಾ ಮತ್ತು ಮೋರಿಗಾಂವ್ ಜಿಲ್ಲೆಗಳ ನಿವಾಸಿಗಳಾಗಿರುತ್ತಾರೆ. ಅವರ ದಾಖಲೆಗಳನ್ನು ಅಸ್ಸಾಂ ರಾಜ್ಯದ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಳುಹಿಸಿ, ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಇ-ಮೇಲ್ ಮೂಲಕ ವರದಿ ಪಡೆದುಕೊಂಡ ನಂತರ ಅವರನ್ನು ಸಹ ಕಾನೂನುಬದ್ಧವಾಗಿ ಬಿಡುಗಡೆಗೊಳಿಸಲಾಗಿದೆ.
ಸಾರ್ವಜನಿಕರಿಗೆ ಸ್ಪಷ್ಟನೆ:
ಮೇಲ್ಕಂಡ ಘಟನೆಯ ಕುರಿತು ದಿನಾಂಕ 19-11-2026 ರಂದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ವಾಸವಾಗಿರುವ ಕುರಿತು ವಿಡಿಯೋವೊಂದು ಹರಿದಾಡುತ್ತಿದ್ದು, ಸದರಿ ವಿಡಿಯೋದಲ್ಲಿನ ಅಂಶಗಳು ವಾಸ್ತವಾಂಶಗಳಿಗೆ ದೂರವಾಗಿರುತ್ತವೆ.**
ಬೆಂಗಳೂರು ನಗರ ಪೊಲೀಸ್ ಇಲಾಖೆಯು ಅಕ್ರಮ ವಲಸಿಗರ ಕುರಿತು ನಿರಂತರವಾಗಿ ನಿಗಾ ವಹಿಸುತ್ತಿದ್ದು, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಆದ್ದರಿಂದ, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಮಾಹಿತಿಗಳನ್ನು ನಂಬಬಾರದು ಹಾಗೂ ಅಂತಹ ಮಾಹಿತಿಗಳನ್ನು ಇತರರಿಗೆ ಹಂಚಿಕೊಳ್ಳುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೋರಲಾಗಿದೆ.
ಉಪ ಪೊಲೀಸ್ ಆಯುಕ್ತರು
ವೈಟ್ಫೀಲ್ಡ್ ವಿಭಾಗ, ಬೆಂಗಳೂರು ನಗರ.
@BlrCityPolice
ಇಂದು ಬೆಳಿಗ್ಗೆ ಶ್ರೀ ಶ್ರೀಹರಿ ಬಾಬು, ಬಿ.ಎಲ್., ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು ಮಾರತ್ತಹಳ್ಳಿ ಉಪವಿಭಾಗದ ವ್ಯಾಪ್ತಿಯ ರೌಡಿಶೀಟರ್ಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೌಡಿಶೀಟರ್ಗಳ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು. ಅಲ್ಲದೆ, ರೌಡಿಶೀಟರ್ಗಳ ಮೇಲೆ ನಿರಂತರ ನಿಗಾ ವಹಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
This morning, Shri Shrihari Babu, B.L., IPS., Deputy Commissioner of Police, Whitefield Division**, visited the residences of rowdy sheeters within the limits of Marathahalli Sub-Division and conducted inspections.
During the visit, he gathered information regarding their activities and cautioned them against involvement in any criminal activities. He also instructed the concerned police officers to maintain continuous surveillance over rowdy sheeters and take necessary preventive measures to maintain law and order.
@BlrCityPolice
@DgpKarnataka
ಇಂದು ಡಾ. ಹರ್ಷ ಪಿ.ಎಸ್., ಐಪಿಎಸ್., ಮಾನ್ಯ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ರವರು ಹಾಗೂ ಶ್ರೀ ಶ್ರೀಹರಿ ಬಾಬು, ಬಿ.ಎಲ್., ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು ಮಾರತ್ತಹಳ್ಳಿ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಬಾಕಿ ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಕುರಿತು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Today, Dr. Harsha P.S., IPS, Hon’ble Police Commissioner, East, Bengaluru City, along with Shri Shrihari Babu, B.L., IPS, Deputy Commissioner of Police, Whitefield Division, visited various police stations under Marathahalli Sub-Division and reviewed their functioning.
During the visit, they reviewed law and order, crime prevention, investigation of pending cases, and timely redressal of public grievances. They also provided necessary guidance and instructions to the officers.
Police officers and staff of Marathahalli Sub-Division were present on the occasion.
@BlrCityPolice
@DgpKarnataka
DCP Whitefield Bengaluru retweeted
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ.
ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗಳೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ.
I am honoured and privileged to assume charge as the Chief Commissioner of Police, Bengaluru City.
With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city.
Together, let us continue building a Bengaluru where safety, trust and service remain our foremost priorities.
#HonouredToServe #ServingBengaluru #BengaluruCityPolice #PublicSafety #PeopleFirst
ಇಂದು ಶ್ರೀ ಶ್ರೀಹರಿ ಬಾಬು, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು, ವಿಭಾಗದ ಎಲ್ಲಾ ACPಗಳು, ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ PSIಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವಿಕೆ, ಗುಣಮಟ್ಟದ ತನಿಖೆ, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಕುರಿತು ಚರ್ಚಿಸಿ, ಅಗತ್ಯ ಮಾರ್ಗಸೂಚಿ ಮತ್ತು ಸೂಚನೆಗಳನ್ನು ನೀಡಿದರು.
@BlrCityPolice
DCP Whitefield Bengaluru retweeted
Strength isn't just about being strong. It's about standing up for others, showing kindness and making a difference every day.
To every man who protects, supports, inspires and leads by example, your efforts matter, and your contributions deserve recognition.
Bengaluru City Police wishes everyone a Happy International Men's Day!
ಶಕ್ತಿ ಎಂದರೆ ಕೇವಲ ಬಲಶಾಲಿಯಾಗಿರುವುದಲ್ಲ. ಇತರರಿಗಾಗಿ ನಿಲ್ಲುವುದು, ದಯೆ ತೋರುವುದು ಮತ್ತು ಪ್ರತಿದಿನವೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ನಿಜವಾದ ಶಕ್ತಿ.
ಇತರರನ್ನು ರಕ್ಷಿಸುವ, ಬೆಂಬಲಿಸುವ, ಪ್ರೇರೇಪಿಸುವ ಮತ್ತು ಮಾದರಿಯಾಗಿ ಮುನ್ನಡೆಯುವ ಪ್ರತಿಯೊಬ್ಬ ಪುರುಷನ ಶ್ರಮವೂ ಮುಖ್ಯವಾಗಿದೆ ಹಾಗೂ ಅವರ ಕೊಡುಗೆಗಳು ಗೌರವಕ್ಕೆ ಅರ್ಹವಾಗಿವೆ.
ಬೆಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಎಲ್ಲರಿಗೂ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು!
#InternationalMensDay #MensDay2026 #BengaluruCityPolice
@CPBlr @DgpKarnataka @KarnatakaCops @Jointcptraffic @CMofKarnataka @PriyankKharge
DCP Whitefield Bengaluru retweeted
ಬದಲಾಗುತ್ತಿರುವ ನಾಯಕತ್ವ | ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್ ಇಲಾಖೆಯ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಅಧಿಕಾರ ಸ್ವೀಕರಿಸಿದ್ದು, ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರು ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರಿನಲ್ಲಿ ಮಾದರಿ ನಾಯಕತ್ವ ನೀಡಿ, ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿ, ಪೊಲೀಸ್ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಿದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಅವರ ಮುಂದಿನ ಜವಾಬ್ದಾರಿಗೆ ಶುಭ ಹಾರೈಸುತ್ತದೆ.
ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರಿಗೆ ಆದರದ ಸ್ವಾಗತ ಕೋರುತ್ತಾ, ಸಾರ್ವಜನಿಕ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಮತ್ತು ನಾಗರಿಕ ಕೇಂದ್ರಿತ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಡಲಾಗಿದೆ.
ಬೆಂಗಳೂರು ನಗರದ ರಕ್ಷಣೆ ಮತ್ತು ಸೇವೆಗಾಗಿ ಅಚಲ ಬದ್ಧತೆಯೊಂದಿಗೆ ನಾಯಕತ್ವದ ಹೊಸ ಅಧ್ಯಾಯ.
Change of Guard | Bengaluru City Police
Shri Seemant Kumar Singh, IPS, formally handed over the baton of leadership to Shri R. Hithendra, IPS, who assumes charge as the new Additional Director General & Chief Commissioner of Police, Bengaluru City.
Bengaluru City Police expresses its sincere gratitude to Sri Seemanth Kumar Singh, IPS, for his exemplary leadership, dedicated service and contributions to policing in Bengaluru, and wishes him continued success in his new role as Additional Director General of Police, Karnataka State Fire & Emergency Services.
We extend a warm welcome to Sri R. Hithendra, IPS, and look forward to his leadership in further strengthening public safety, effective policing and citizen-centric services.
A new chapter of leadership, with an unwavering commitment to serving and safeguarding Bengaluru.
#BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP Whitefield Bengaluru retweeted
ಶಕ್ತಿ, ಶಿಸ್ತು ಮತ್ತು ದೃಢಸಂಕಲ್ಪದ ಪ್ರದರ್ಶನ!
ಹೈದರಾಬಾದ್ನಲ್ಲಿ ಆಯೋಜಿಸಲಾಗಿದ್ದ 11ನೇ ಅಖಿಲ ಭಾರತ ಪೊಲೀಸ್ ಜೂಡೋ ಕ್ಲಸ್ಟರ್ ಚಾಂಪಿಯನ್ಶಿಪ್ - 2026ರಲ್ಲಿ, ಕರ್ನಾಟಕ ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್ ಶ್ರೀಮತಿ/ಕುಮಾರಿ ಅಂಜು ಎಸ್. ಅವರು ಪೆನ್ಕಾಕ್ ಸಿಲಾಟ್ ಸೋಲೋ (ಮಹಿಳೆಯರ ವಿಭಾಗ) ಹಾಗೂ ಟ್ಯಾಂಡಿಂಗ್ (ಮಹಿಳೆಯರ - 45 ಕೆಜಿ ವಿಭಾಗ) ಸ್ಪರ್ಧೆಗಳೆರಡರಲ್ಲೂ ತೃತೀಯ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ.
ಈ ಪ್ರಶಂಸನೀಯ ಸಾಧನೆಗಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಲಭಿಸಲಿ ಎಂದು ಶುಭ ಹಾರೈಸುತ್ತದೆ.
Strength, discipline and determination on display!
Constable Anju S. of Karnataka Police secured Third Place in both Pencak Silat Solo (Women) and Tanding (Women – 45 kg) at the 11th All India Police Judo Cluster Championship 2026, held in Hyderabad.
Bengaluru City Police congratulates her on this commendable achievement and wishes her continued success!
#KarnatakaPolice #BengaluruCityPolice #PoliceSports #ProudMoment
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP Whitefield Bengaluru retweeted
Whitefield Cyber Crime Police conducted an awareness session for NBFCs and Payment Gateway representatives on AI-driven cyber threats and prevention.
NBFC ಮತ್ತು ಪೇಮೆಂಟ್ ಗೇಟ್ವೇ ಪ್ರತಿನಿಧಿಗಳಿಗೆ AI ಆಧಾರಿತ ಸೈಬರ್ ದಾಳಿಗಳು ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಯಿತು.
🪔 *ದೀಪಾವಳಿ ಸಂಭ್ರಮ* 🪔
ಇಂದು ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು ದೀಪಾವಳಿ ಹಬ್ಬದ ಪ್ರಯುಕ್ತ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಗುಪಾಳ್ಯ ಪೊಲೀಸ್ ವಸತಿ ಗೃಹದಲ್ಲಿ ವಾಸವಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಸಿಹಿ ಹಂಚುವ ಮೂಲಕ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
🪔 *Diwali Celebrations* 🪔
Today, on the occasion of Diwali, Sri Saidulu Adavath, IPS, Deputy Commissioner of Police, Whitefield Division, celebrated the festival with the family members of police officers and staff residing at the Jogupalya Police Quarters, under the limits of Halasuru Police Station. He shared sweets and extended his heartfelt Diwali greetings to all.
#BengaluruCityPolice #WhitefieldDivision #DeepavaliCelebration
@BlrCityPolice
@CPBlr
@DgpKarnataka
@AddlCPEast
DCP Whitefield Bengaluru retweeted
ಇದನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುತ್ತೀರಾ, ನಿರ್ಲಕ್ಷಿಸುತ್ತೀರಾ ಅಥವಾ ವರದಿ ಮಾಡುತ್ತೀರಾ?
ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಮತ್ತು ನಿಮ್ಮ ಉತ್ತರವನ್ನು ಕಾಮೆಂಟ್ನಲ್ಲಿ ತಿಳಿಸಿ.
ನೆನಪಿಡಿ: ನಿಮ್ಮ ಒಟಿಪಿ (OTP) ನಿಮಗಾಗಿ ಮಾತ್ರ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
Would you share it, ignore it, or report it?
Choose wisely and tell us your answer in the comments.
Remember: Your OTP is meant for you. Never share it with anyone.
#BengaluruCityPolice #CyberSafety #OTPScam #StayAlert #BeCyberSafe #WeServeWeProtect
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
DCP Whitefield Bengaluru retweeted
Say NO to Ragging.
Inspector Sadiq Pasha led an Anti-Ragging Awareness Programme at Vydehi Degree College on 31.10.2026.
ರ್ಯಾಗಿಂಗ್ಗೆ ಕಡಿವಾಣ ಹಾಕಿ.
ವೈದೇಹಿ ಪದವಿ ಕಾಲೇಜಿನಲ್ಲಿ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅವರಿಂದ ರ್ಯಾಗಿಂಗ್ ವಿರೋಧಿ ಜಾಗೃತಿ.
DCP Whitefield Bengaluru retweeted
Whitefield Division organized a training program for staff on Criminal Investigation, POCSO & Dowry Death cases led by expert resource persons at SEA COLLEGE. Strengthening investigative rigor and victim-centric approaches! 🛡️⚖️
🤖 Made with AI
DCP Whitefield Bengaluru retweeted
ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು. ಕರುನಾಡು ಕೇವಲ ಮಣ್ಣಲ್ಲ, ಅದು ನಮ್ಮೆಲ್ಲರ ಜೀವನಾಡಿ. ನಮ್ಮ ಸಾಹಿತ್ಯ, ಕಲೆ ಮತ್ತು ಭವ್ಯ ಪರಂಪರೆ ನಮ್ಮ ಹೆಮ್ಮೆಯ ಸಂಕೇತ.
ಶಾಂತಿ ಮತ್ತು ಸಹಬಾಳ್ವೆಯ ಈ ಸುಂದರ ನಾಡನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಪ್ರತಿಯೊಬ್ಬ ನಾಗರಿಕರ ಸುರಕ್ಷತೆ ಮತ್ತು ನಗರದ ನೆಮ್ಮದಿಯನ್ನು ಕಾಪಾಡಲು ಬೆಂಗಳೂರು ನಗರ ಪೊಲೀಸ್ ಇಲಾಖೆಯು ಸದಾ ಸಿದ್ಧವಾಗಿದೆ.
ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ !
ಬನ್ನಿ, ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸೋಣ!
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Kannada is not just a language, it is our breath. Karnataka is not merely a land, it is our lifeline. Our literature, art, and glorious heritage are the symbols of our pride.
The responsibility of protecting this beautiful land of peace and harmony is ours. Bengaluru City Police is always ready to safeguard every citizen and maintain the peace of the city.
May the fragrance of Kannada spread everywhere!
Come, let us celebrate the spirit of Karnataka!
Hearty Kannada Rajyotsava wishes to all Kannadigas! 💛❤️
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @blrcitytraffic







































