Karnataka Congress (@INCKarnataka) header
Karnataka Congress (@INCKarnataka) profile picture

The Official Twitter Account of The Karnataka Pradesh Congress Commitee | Facebook: https://teapawt.org/t.co/tNgL2jIfOK

Karnataka, India
Joined July 2016
YouTube Link for LIVE Special Congress Party briefing by Shri Rahul Gandhi, Leader of Opposition (Lok Sabha), at 5 PM today, 28 November 2026, at Indira Bhawan, New Delhi. youtube.com/live/8SCtVUVSWdw…
1
708
ಸ್ವಂತ ಸೂರು ಹೊಂದಬೇಕು ಎಂಬ ಬಡವರ ಕನಸನ್ನು ನನಸಾಗಿಸಲು ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ರಾಜ್ಯದ ನಿವೇಶನ ರಹಿತರಿಗೆ 15 ಲಕ್ಷ ಉಚಿತ ಸೈಟ್, 1 ಲಕ್ಷ ಮನೆಗಳನ್ನು ಹಂಚಲು ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ʻನಮ್ಮ ಮನೆʼ ಯೋಜನೆಯಡಿ ಶ್ರಮಿಕರು ಹಾಗೂ ಬಡವರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ 30 ಸಾವಿರ ನಿವೇಶನ ನೀಡಲು ತೀರ್ಮಾಸಲಾಗಿದೆ.
6
767
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಡಿ. 7ರ ವರೆಗೆ 5ನೇ ವರ್ಷದ ಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಬೆಳಗ್ಗೆ 9ರಿಂದ ರಾತ್ರಿ 8 ರವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. 15 ಲಕ್ಷಕ್ಕೂ ಅಧಿಕ ವೈವಿಧ್ಯಮಯ ಹೂವುಗಳು, 1.20 ಲಕ್ಷ ಸಸ್ಯಗಳೊಂದಿಗೆ ಅರಳಿರುವ ಈ ಪುಷ್ಪಲೋಕಕ್ಕೆ ಹೊಯ್ಸಳ ವಾಸ್ತುಶಿಲ್ಪ ಹಾಗೂ ಮೆಟ್ರೋ ರೈಲಿನ ಹೂವಿನ ಕಲಾಕೃತಿಗಳು ಇನ್ನಷ್ಟು ಮೆರುಗು ನೀಡಿವೆ.
1
5
790
ಗ್ರಾಹಕರ ಹಿತ, ಬೆಲೆ ಏರಿಕೆಯ ಹೊರೆ ಇಳಿಸುವುದು ಕಾಂಗ್ರೆಸ್‌ ಸರ್ಕಾರದ ಸಂಕಲ್ಪ. ಎಸ್ಕಾಂಗಳ ಆರ್ಥಿಕ ಕಾರ್ಯಕ್ಷಮತೆ ಸುಧಾರಿಸಿ ಲಾಭದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಲಾಭವನ್ನು ಗ್ರಾಹಕರಿಗೂ ಹಂಚಲು ಸರ್ಕಾರ ನಿರ್ಧರಿಸಿದೆ. ಪ್ರತಿ ಯೂನಿಟ್‌ಗೆ ಸರಾಸರಿ 16 ಪೈಸೆ ಮರುಪಾವತಿ ಮಾಡುವ ಮೂಲಕ ವಿದ್ಯುತ್ ಗ್ರಾಹಕರಿಗೆ ಆರ್ಥಿಕ ಅನುಕೂಲ ಕಲ್ಪಿಸಲಾಗುತ್ತಿದೆ.
3
6
22
1,424
ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪುಣ್ಯಸ್ಮರಣೆಯಂದು ಅನಂತ ವಂದನೆಗಳು.
1
3
9
858
ನಾಡಿನ ಸಂಸ್ಕೃತಿ, ಜಾನಪದ ಕಲೆ ಮತ್ತು ಕಲಾವೈಭವವನ್ನು ಉದ್ಯಾನನಗರಿಯಲ್ಲಿ ಸಂಭ್ರಮಿಸಲು ಡಿ.4ರಿಂದ 13 ರವರೆಗೆ ʻಬೆಂಗಳೂರು ಜಾತ್ರೆʼ ಆಯೋಜಿಸಲಾಗಿದೆ. ನಗರದ ವಿವಿಧ ವೇದಿಕೆಗಳಲ್ಲಿ ಕರ್ನಾಟಕದ 500ಕ್ಕೂ ಹೆಚ್ಚು ಜಾನಪದ ಕಲಾವಿದರು ಹಾಗೂ 20 ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾ ಜಾತ್ರೆಯಲ್ಲಿ ನೀವೂ ಭಾಗವಹಿಸಿ, ಜಾನಪದ ಸೊಗಡನ್ನು ಕಣ್ತುಂಬಿಕೊಳ್ಳಿ.
1
1
2
855
ಸಮಾಜ ಸುಧಾರಕರು, ಸಮಾನತೆಯ ಹರಿಕಾರರಾದ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ನಮ್ಮ ಗೌರವಪೂರ್ವಕ ನಮನಗಳು.
7
18
749
ಎಸ್ ಐಆರ್ ಪ್ರಕ್ರಿಯೆಯಲ್ಲಿ ಮತದಾನದ ಹಕ್ಕು ಕಳೆದುಕೊಂಡಿರುವ ಅರ್ಹ ಮತದಾರರ ನೆರವಿಗಾಗಿ ಎಐಸಿಸಿ ವತಿಯಿಂದ iamvoterakshak.in ವೆಬ್ ಸೈಟ್ ಬಿಡುಗಡೆ ಮಾಡಿದ್ದು, ಮತದಾನದ ಹಕ್ಕು ಕಳೆದುಕೊಂಡಿರುವವರು ಇಲ್ಲಿ ತಮ್ಮ ಧ್ವನಿ ಎತ್ತಬಹುದಾಗಿದೆ. ಈ ವೆಬ್ ಸೈಟ್ ಕುರಿತಾಗಿ ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರ ಸಮ್ಮುಖದಲ್ಲಿ ಬ್ಲಾಕ್ ಮಟ್ಟದ ಕಾಂಗ್ರೆಸ್ ಮುಖಂಡರಿಗೆ ತರಬೇತಿ ನೀಡಲಾಯಿತು.
1
10
47
1,579
ಜನರಿಗೆ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಹಾಗೂ ಒಂದೇ ಸೂರಿನಡಿ ಸಾರ್ವಜನಿಕರ ಅಹವಾಲುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ʻಪ್ರಜಾಸೇವಾ ಆಯುಕ್ತಾಲಯʼ ಸ್ಥಾಪನೆಯಾಗಿದೆ. ಇದರಿಂದ ದೂರುಗಳ ತ್ವರಿತ ವಿಲೇವಾರಿ ಹಾಗೂ ಆಡಳಿತ ಸುಧಾರಣೆಗೆ ಇನ್ನಷ್ಟು ವೇಗ ಸಿಗಲಿದೆ.
4
14
44
1,417
ಯುವಜನರ ಭವಿಷ್ಯದ ಕಾಳಜಿ, ಅರ್ಹತೆಗೆ ಮನ್ನಣೆ ಇದು ಕಾಂಗ್ರೆಸ್ ಸರ್ಕಾರದ ಬದ್ಧತೆ ಕೆಎಎಸ್ ಪರೀಕ್ಷೆ ನಡೆದ ಕೇವಲ 11 ದಿನಗಳಲ್ಲೇ ಫಲಿತಾಂಶ ಪ್ರಕಟಿಸಿ ಇತಿಹಾಸ ನಿರ್ಮಿಸಿದ ಸರ್ಕಾರ. ತ್ವರಿತ ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
21
15
49
3,434
ಭಾರತೀಯರಿಗೆ ಸಂವಿಧಾನ ಬರೆಯಲು ಸಾಮರ್ಥ್ಯವಿಲ್ಲ ಎಂದಾಗ, ಎಂ ಎನ್ ರಾಯ್ ಎಂಬುವವರು ನಮಗೆ ಸಾಮರ್ಥ್ಯ, ಪ್ರತಿಭೆ ಇದೆ ಎಂದು ನಾವು ಸಂವಿಧಾನ ರಚಿಸಲು ಮುಂದೆ ಬರುತ್ತೇವೆ. 1946ರ ಡಿ.9ರಂದು 80 ವರ್ಷಗಳ ಹಿಂದೆ ಮೊದಲ ಸಂವಿಧಾನ ಸಭೆ ಸೇರಲಾಗುತ್ತದೆ. ಅಲ್ಲಿ ಚರ್ಚೆ ನಡೆಸಿದಾಗ, ಸಾಮಾಜವಾದ ಎಂಬುದರ ಬಗ್ಗೆ ಚರ್ಚೆ ಆದಾಗ,ಶ್ರೀಮಂತ ಹಾಗೂ ಬಡವರ ನಡುವಣ ಅಂತರ ಕಡಿಮೆಯಾಗಬೇಕಾಗಿರುವುದೇ ಸಮಾಜವಾದ. ಸಂವಿಧಾನ ವಿರೋಧಿಗಳು ಸಮಾಜವಾದದ ವಿರುದ್ಧವಾಗಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ವಿನಃ ಉಳ್ಳವರಿಗಲ್ಲ. @HariprasadBK2 ಕೆಪಿಸಿಸಿ ಅಧ್ಯಕ್ಷರು
1
9
26
1,239
ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸಲು, ಮಾಹಿತಿ ಪಡೆಯಲು cmdashboard.karnataka.gov.in… (CM Dashboard) ಪೋರ್ಟಲ್ ಲೋಕಾರ್ಪಣೆಗೊಂಡಿದೆ. ಪಂಚ ಗ್ಯಾರಂಟಿಗಳ ಅಂಕಿ-ಅಂಶಗಳು, ಜಿಲ್ಲಾವಾರು ಅಥವಾ ಇಲಾಖಾವಾರು ಕಾಮಗಾರಿಗಳ ಪ್ರಗತಿ, ಪ್ರಜಾಸೇವೆಗಳ ಮಾಹಿತಿಯನ್ನು ಇನ್ನು ಮುಂದೆ ನೀವು ಬೆರಳ ತುದಿಯಲ್ಲೇ ಪಡೆಯಬಹುದು. ಆಡಳಿತದಲ್ಲಿ ಪಾರದರ್ಶಕತೆ, ಜನಸ್ನೇಹಿ ಆಡಳಿತ ನಮ್ಮ ಗುರಿ.
5
13
1,164
ಮನುವಾದಿ ಬಿಜೆಪಿಗರಿಂದ ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ.
10
12
40
1,771
ಎಐ, ಸೆಮಿಕಂಡಕ್ಟರ್, ರೋಬೊಟಿಕ್ಸ್ ಸೇರಿದಂತೆ ಹಲವು ಡೀಪ್ ಟೆಕ್ ಕ್ಷೇತ್ರಗಳಲ್ಲಿ ಭರಪೂರ ಹೂಡಿಕೆ ಸೆಳೆಯುವಲ್ಲಿ ʻಬೆಂಗಳೂರು ಟೆಕ್ ಸಮ್ಮಿಟ್ʼ ಯಶಸ್ವಿಯಾಗಿದೆ. ಸಮ್ಮಿಟ್ ನಲ್ಲಿ ಭಾಗವಹಿಸಿದ್ದ 24 ಜಾಗತಿಕ ಸಂಸ್ಥೆಗಳು ಡೀಪ್ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ 1.050 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿವೆ. 68ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಇದರ ಪ್ರಯೋಜನ ಪಡೆಯಲಿವೆ.
1
5
28
1,341
ರಾಜ್ಯದ ಮೂಲಸೌಲಭ್ಯಗಳ ಅಭಿವೃದ್ಧಿಗೆ ₹31,000 ಕೋಟಿ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಜತೆಗೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ₹16,000 ಕೋಟಿ ವಿನಿಯೋಗಿಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
1
7
22
1,334
ತಮ್ಮ ಕೀರ್ತನೆ ಮತ್ತು ಕಾವ್ಯಗಳ ಮೂಲಕ ಜಾತಿ ತಾರತಮ್ಯವನ್ನು ವಿರೋಧಿಸಿ, ಭಕ್ತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಸಂತ ಕನಕದಾಸ ಜಯಂತಿ ಶುಭಾಶಯಗಳು.
1
12
50
1,253
Karnataka Congress retweeted
On the evening of Ambedkar Jayanti on April 14, 2026, the Modi Govt had made the Delimitation Bills public that met their well-deserved fate on the night of April 17, 2026. Now on Constitution Day, after 105 days of Operation Lotus, the Modi Govt announces a special session, hoping that it will get its super-tainted two-thirds majority to pass a Constitution amendment bill. Can there be a great insult to and assault on the Constitution? The fight is on.
123
478
26
1,714
177,952
ಗ್ರಾಹಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಕೆಎಂಎಫ್ ಪ್ರತಿ ಕೆ.ಜಿ ಮೊಸರಿನ ಬೆಲೆಯನ್ನು ₹2 ಇಳಿಸಿದೆ.
31
10
4
77
6,041
ಭೀಕರ ಬರಗಾಲದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರೈತನಿಗೆ ₹5,000 ಪರಿಹಾರವನ್ನು ಎರಡು ಹಂತದಲ್ಲಿ ನೀಡಲು ಮುಂದಾಗಿದ್ದು, ಮೊದಲ ಹಂತದಲ್ಲಿ ₹2,500 ವಿತರಣೆಯಾಗಿದ್ದು, ಎರಡನೇ ಹಂತದ ಬಿಡುಗಡೆಗೆ ಸರ್ಕಾರ ಆದೇಶ ನೀಡಿದೆ. ಆಮೂಲಕ ನಮ್ಮದು ನುಡಿದಂತೆ ನಡೆವ ಸರ್ಕಾರ ಎಂದು ಸಾಬೀತಾಗಿದೆ. ಬರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ಹಾಗೂ ಎನ್ ಡಿಎ ದೋಸ್ತಿಗಳು ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಪರಿಹಾರ ಕೊಡಿಸುವುದು ಯಾವಾಗ?
2
10
36
1,554
ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ವೇಗ ನೀಡಲು ಹಾಗೂ ಯುವಜನತೆಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಜಪಾನ್‌ನ ಕವಾಸಕಿ ಸಂಸ್ಥೆಯೊಂದಿಗೆ (Kawasaki Heavy Industries) ₹800 ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 2 ಹಂತಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಉನ್ನತಮಟ್ಟದ 600 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
1
4
10
936