Pinned Tweet
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes!
An incredible story of a people’s movement: 1.5 crore trees planted, raising forest cover from just 0.17% to 2%.
A true testament to political will, systemic action & the power of collective participation.
Proud that Vijayapura’s green success is inspiring the world!
My heartfelt thanks to all the stakeholders and the people of Vijayapura.
nytimes.com/card/2025/09/02/…
Karnataka’s Space Technology Ambitions Get a ₹350 Crore Boost from Pixxel
I welcome the decision of Bengaluru-based space technology company Pixxel to invest ₹350 crore in its next-phase satellite manufacturing facility in Karnataka.
Over the past several months, I have been actively engaging with the company to understand its expansion plans and facilitate its investment.
We received the investment proposal involving six acres of land on November 3 and secured its approval through the State Level Single Window Clearance Committee (SLWCC) within just two weeks.
This reflects our government's commitment to swift decision-making, transparent governance and an investor-friendly business environment.
Pixxel’s investment will further strengthen Karnataka’s leadership in space technology while opening up new opportunities in advanced manufacturing, innovation and employment.
@PixxelSpace @awaisahmedna @kshitijgokul
#Pixxel #SLSWCC #InvestKarnataka
ಕರ್ನಾಟಕದಲ್ಲಿ ₹350 ಕೋಟಿ ಹೂಡಿಕೆಯೊಂದಿಗೆ ಪಿಕ್ಸೆಲ್ನ ಉಪಗ್ರಹ ಉತ್ಪಾದನಾ ಘಟಕ:
ನವೆಂಬರ್ 3ರಂದು ಪ್ರಸ್ತಾವನೆ ಸ್ವೀಕೃತಿ : ಕೇವಲ ಎರಡು ವಾರಗಳಲ್ಲೇ ಅನುಮೋದನೆ!
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು!
ಬೆಂಗಳೂರಿನ ಹೆಮ್ಮೆಯ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಪಿಕ್ಸೆಲ್ (Pixxel) ತನ್ನ ಮುಂದಿನ ಹಂತದ ಉಪಗ್ರಹ ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ₹350 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿರುವುದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಕಳೆದ ಹಲವು ತಿಂಗಳುಗಳಿಂದ ಸಂಸ್ಥೆಯೊಂದಿಗೆ ನಿರಂತರ ಮಾತುಕತೆ ನಡೆಸಿ, ಅವರ ವಿಸ್ತರಣಾ ಯೋಜನೆಗಳು ಹಾಗೂ ಹೂಡಿಕೆಯ ಅಗತ್ಯಗಳನ್ನು ಅರಿತುಕೊಂಡು, ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸಲು ನಮ್ಮ ಸರ್ಕಾರ ಸತತ ಪ್ರಯತ್ನ ನಡೆಸಿದೆ.
ವಿಶೇಷವಾಗಿ, 6 ಎಕರೆ ಭೂಮಿಗಾಗಿ ₹350 ಕೋಟಿ ಹೂಡಿಕೆಯ ಪ್ರಸ್ತಾವನೆ ನವೆಂಬರ್ 3ರಂದು ಸ್ವೀಕೃತವಾಗಿದ್ದು, ಕೇವಲ ಎರಡು ವಾರಗಳಲ್ಲೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ (SLWCC) ಮುಂದೆ ಮಂಡಿಸಿ ಅನುಮೋದನೆ ನೀಡಲಾಗಿದೆ.
ಇದು ಹೂಡಿಕೆದಾರರಿಗೆ ತ್ವರಿತ ಅನುಮೋದನೆ, ಪಾರದರ್ಶಕ ಆಡಳಿತ ಹಾಗೂ ಉದ್ಯಮಸ್ನೇಹಿ ವಾತಾವರಣ ಒದಗಿಸುವ ನಮ್ಮ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ.
ಪಿಕ್ಸೆಲ್ ನ ಈ ಹೂಡಿಕೆಯು ರಾಜ್ಯದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಅತ್ಯಾಧುನಿಕ ಉತ್ಪಾದನೆ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ.
#PiXXeL #SLWCC #investkarnataka
@PixxelSpace @awaisahmedna @kshitijgokul
ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ಕಾಂಪೋನೆಂಟ್ಸ್ ಗಳ ಉತ್ಪಾದನಾ ಘಟಕ ಸ್ಥಾಪನೆಗೆ ಜೆಎಕ್ಸ್ ಮೆಟಲ್ಸ್ ಆಸಕ್ತಿ!
ಜಪಾನ್ನ ಜೆಎಕ್ಸ್ ಮೆಟಲ್ಸ್ ಟ್ರೇಡಿಂಗ್ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಟ್ಸುಶಿ ಮುತ್ಸುನೋಬು ಅವರ ನೇತೃತ್ವದ ನಿಯೋಗದೊಂದಿಗೆ ಫಲಪ್ರದ ಚರ್ಚೆ ನಡೆಸಿದೆ.
ಕರ್ನಾಟಕದ ಸದೃಢ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ಪ್ರಯೋಜನ ಪಡೆದುಕೊಂಡು, ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಕಾಂಪೋನೆಂಟ್ಸ್ ಗಳ ಹಾಗೂ ಸಂಬಂಧಿತ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲು ಸಂಸ್ಥೆ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.
ರಾಜ್ಯದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಸಂಸ್ಥೆಯನ್ನು ಸಂಯೋಜಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು. ಸೆಮಿಕಂಡಕ್ಟರ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಉತ್ಪಾದನಾ ಸಾಮರ್ಥ್ಯ ಹಾಗೂ ನುರಿತ ಎಂಜಿನಿಯರಿಂಗ್ ಮಾನವ ಸಂಪನ್ಮೂಲದಲ್ಲಿ ಕರ್ನಾಟಕ ಹೊಂದಿರುವ ಬಲವನ್ನು ಈ ಸಂದರ್ಭದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.
ಸಂಸ್ಥೆಯ ಪ್ರಸ್ತಾವಿತ ಉತ್ಪಾದನಾ ಯೋಜನೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸರ್ಕಾರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿರುವೆ. ಜೊತೆಗೆ, ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶ (GIM–2027)ದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದೇನೆ.
#JXMetals #GIM2027 #InvestKarnataka #KarnatakaDelegationInJapan
JX Metals Trading keen to establish electronic components manufacturing plant in Karnataka!
Held discussions with a delegation from Japan’s JX Metals Trading, led by its President and CEO, Mr. Atsushi Mutsunobu.
The company expressed strong interest in establishing a manufacturing facility for electronic components and related products in Karnataka, leveraging our robust semiconductor and electronics ecosystem.
We explored opportunities to integrate the company into Karnataka’s semiconductor and electronics supply chains, capitalising on our strengths in design, R&D, manufacturing and engineering talent.
I assured the delegation of our Government’s full support in taking forward its proposed manufacturing plans and invited the company’s leadership to participate in the Global Investors Meet 2027.
#JXMetals #GIM2027 #InvestKarnataka #KarnatakaDelegationInJapan
26
977
JX Metals Trading keen to establish electronic components manufacturing plant in Karnataka!
Held discussions with a delegation from Japan’s JX Metals Trading, led by its President and CEO, Mr. Atsushi Mutsunobu.
The company expressed strong interest in establishing a manufacturing facility for electronic components and related products in Karnataka, leveraging our robust semiconductor and electronics ecosystem.
We explored opportunities to integrate the company into Karnataka’s semiconductor and electronics supply chains, capitalising on our strengths in design, R&D, manufacturing and engineering talent.
I assured the delegation of our Government’s full support in taking forward its proposed manufacturing plans and invited the company’s leadership to participate in the Global Investors Meet 2027.
#JXMetals #GIM2027 #InvestKarnataka #KarnatakaDelegationInJapan
Ajinomoto Expresses Interest in Investing in Karnataka’s Biopharma Sector!
Held meaningful discussions with Mr. Tomo Takagi, Head of the BioPharma Solution Group, and Mr. Yaron R. Silberberg, Head of the Biologics Business Unit at Japan’s renowned global company, Ajinomoto.
Recognising Karnataka’s rapidly growing bioeconomy and its strong biopharma and life sciences ecosystem, Ajinomoto expressed interest in exploring investment opportunities and future expansion in the State.
Discussions focused on the availability of skilled talent for the company’s future operations, facilitating connections with universities and academic institutions, providing guidance on HR practices in India, and sharing details of investment incentives available in Karnataka.
I assured the delegation of the Government’s full support and assistance in facilitating all requirements for the successful implementation of the proposed investment.
I also invited Ajinomoto’s leadership to participate in the upcoming Global Investors Meet 2027.
#GIM2027 #InvestKarnataka #KarnatakaDelegationInJapan #Ajinomoto
ಕರ್ನಾಟಕದ ಬಯೋಫಾರ್ಮಾ ವಲಯಕ್ಕೆ ಜಾಗತಿಕ ಮನ್ನಣೆ; ಹೂಡಿಕೆಗೆ ಅಜಿನೊಮೊಟೊ ಆಸಕ್ತಿ!
ಜಪಾನ್ ನ ಪ್ರತಿಷ್ಠಿತ ಜಾಗತಿಕ ಸಂಸ್ಥೆಯಾದ ಅಜಿನೊಮೊಟೊ (Ajinomoto) ಕಂಪನಿಯ ಬಯೋಫಾರ್ಮಾ ಸೊಲ್ಯೂಷನ್ಸ್ ಗ್ರೂಪ್ ಮುಖ್ಯಸ್ಥರಾದ ಶ್ರೀ ಟೊಮೊ ಟಕಾಗಿ ಹಾಗೂ ಬಯಾಲಜಿಕ್ಸ್ ಬಿಸಿನೆಸ್ ಯೂನಿಟ್ ಮುಖ್ಯಸ್ಥರಾದ ಶ್ರೀ ಯಾರೋನ್ ಆರ್. ಸಿಲ್ಬರ್ ಬರ್ಗ್ ಅವರೊಂದಿಗೆ ಮಹತ್ವದ ಸಭೆ ನಡೆಸಿದೆ.
ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಜೈವಿಕ ಆರ್ಥಿಕತೆ (Bioeconomy), ಬಯೋಫಾರ್ಮಾ ಮತ್ತು ಜೀವ ವಿಜ್ಞಾನ ಕ್ಷೇತ್ರಗಳ ಸದೃಢ ಪರಿಸರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಹೂಡಿಕೆ ಹಾಗೂ ಭವಿಷ್ಯದ ವಿಸ್ತರಣೆಗೆ ಅಜಿನೊಮೊಟೊ ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ.
ಸಂಸ್ಥೆಯ ಮುಂದಿನ ಕಾರ್ಯಾಚರಣೆಗಳಿಗೆ ಅಗತ್ಯವಿರುವ ನುರಿತ ಮಾನವ ಸಂಪನ್ಮೂಲ ಲಭ್ಯತೆ, ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸುವುದು, ಭಾರತದ ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿಗಳ ಕುರಿತು ಮಾರ್ಗದರ್ಶನ ಮತ್ತು ಹೂಡಿಕೆ ಪ್ರೋತ್ಸಾಹಧನಗಳ ವಿವರಗಳನ್ನು ಒದಗಿಸುವ ಕುರಿತು ಚರ್ಚಿಸಲಾಯಿತು.
ಸಂಸ್ಥೆಯ ಪ್ರಸ್ತಾವಿತ ಹೂಡಿಕೆಯ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ಸರ್ಕಾರದಿಂದ ಒದಗಿಸುವ ಭರವಸೆ ನೀಡಿದ್ದೇನೆ.
ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶ (GIM–2027)ದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದೇನೆ.
#GIM2027 #InvestKarnataka #KarnatakaDelegationInJapan #Ajinomoto
Japan’s Neturen Eyes Investment in Karnataka’s Automobile and Advanced Engineering Sector
Held a productive meeting today with a delegation from Neturen Co., Ltd., a leading Japanese industrial company, led by its Executive Officer, Mr. Kyo Hosoda.
We discussed the company’s proposed investment in a state-of-the-art manufacturing facility at Harohalli to produce high-strength wires for automotive suspension springs using its specialised induction heating technology.
I assured the delegation of the government’s full cooperation and support throughout the project’s implementation. Our discussions also covered land, infrastructure, power, other essential facilities and applicable investment incentives.
I also extended an invitation to Neturen’s leadership to participate in the upcoming Global Investors Meet (GIM 2027).
We remain committed to leveraging Japan’s advanced technological expertise, Karnataka’s business-friendly ecosystem and skilled workforce to position the state as a global manufacturing hub.
#Neturen #GIM2027 #InvestKarnataka #KarnatakaDelegationInJapan
ರಾಜ್ಯದ ಆಟೋಮೊಬೈಲ್ & ಸುಧಾರಿತ ಎಂಜಿನಿಯರಿಂಗ್ ವಲಯಕ್ಕೆ ನೆಚುರೇನ್ ಹೂಡಿಕೆ
ಹಾರೋಹಳ್ಳಿಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪನೆಗೆ ಮಹತ್ವದ ಚರ್ಚೆ!
ಜಪಾನ್ ನ ಪ್ರಮುಖ ಉದ್ಯಮ ಸಂಸ್ಥೆಯಾದ ನೆಚುರೇನ್ ಕಂಪನಿ ಲಿಮಿಟೆಡ್ (Neturen Co., Ltd.)ನ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕ್ಯೋ ಹೊಸೋಡಾ ಅವರ ನೇತೃತ್ವದ ನಿಯೋಗದೊಂದಿಗೆ ಈ ದಿನ ಮಹತ್ವದ ಸಭೆ ನಡೆಸಿದೆ.
ಕರ್ನಾಟಕದ ಹಾರೋಹಳ್ಳಿಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪಿಸುವ ನೆಚುರೇನ್ ಸಂಸ್ಥೆಯ ಪ್ರಸ್ತಾವಿತ ಹೂಡಿಕೆಯ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ವಿಶೇಷ ಇಂಡಕ್ಷನ್ ಹೀಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ವಾಹನಗಳ ಸಸ್ಪೆನ್ಷನ್ ಸ್ಪ್ರಿಂಗ್ ಗಳಿಗೆ ಅಗತ್ಯವಾದ ಹೆಚ್ಚಿನ ಸಾಮರ್ಥ್ಯದ ವೈರ್ ಉತ್ಪಾದಿಸುವ ತಂತ್ರಜ್ಞಾನವು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.
ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ಸರ್ಕಾರದಿಂದ ಒದಗಿಸುವ ಭರವಸೆ ನೀಡಿದ್ದೇನೆ.
ಜೊತೆಗೆ, ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶ (GIM-2027)ರಲ್ಲಿ ಭಾಗವಹಿಸುವಂತೆ ನೆಚುರೇನ್ ಸಂಸ್ಥೆಯ ನಾಯಕತ್ವಕ್ಕೆ ಆಹ್ವಾನ ನೀಡಿದೆ.
ಜಪಾನ್ ನ ಅತ್ಯಾಧುನಿಕ ತಂತ್ರಜ್ಞಾನ, ಕರ್ನಾಟಕದ ಉದ್ಯಮಸ್ನೇಹಿ ವಾತಾವರಣ ಮತ್ತು ಸಮರ್ಥ ಮಾನವ ಸಂಪನ್ಮೂಲದ ಸಮನ್ವಯದೊಂದಿಗೆ ರಾಜ್ಯವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ರೂಪಿಸುವ ನಮ್ಮ ಪ್ರಯತ್ನ ನಿರಂತರವಾಗಿದೆ.
#Neturen #GIM2027 #InvestKarnataka #KarnatakaDelegationInJapan
ಬಸವ ಸಮಿತಿಯ ಅಧ್ಯಕ್ಷರಾಗಿ ಬಸವ ತತ್ವ ಹಾಗೂ ವಚನ ಸಾಹಿತ್ಯದ ಮೌಲ್ಯಗಳನ್ನು ಪಸರಿಸುತ್ತಾ, ಸಮಾಜವನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿರುವ ಶರಣ ಶ್ರೀ ಅರವಿಂದ ಜತ್ತಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಶಕ್ತಿಯನ್ನು ಕರುಣಿಸಲಿ.
ಬಸವಾದಿ ಪ್ರಮಥರ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸುತ್ತೇನೆ.
#ಬಸವಸಮಿತಿ
M B Patil retweeted
🚨 Pixxel picks Bengaluru for 250,000 sq ft satellite manufacturing facility
The decision comes after Andhra Pradesh and Tamil Nadu attempted to woo the space-tech startup with offers of land, as southern states compete to attract aerospace and defence investments
@AihikS & I report.
moneycontrol.com/technology/…
Strengthening Karnataka–JETRO ties to accelerate Japanese investments!
Had a productive meeting with Ms. Akiko Okumura, Executive Vice President of JETRO, to deepen economic ties and further accelerate Japanese investments in Karnataka.
Key highlights from our discussion:
▶️ Identifying a suitable Civic Amenity (CA) site near the Japanese Industrial Township for establishing a Japanese school and strengthening the ecosystem for Japanese expatriates.
▶️ Promoting Japanese-language training for Karnataka’s ITI students to enhance their employability and unlock global career opportunities with Japanese companies.
▶️ Inviting JETRO leadership to the upcoming #GIM2027 and proposing a dedicated Japan Country Roundtable, in the presence of the Ambassador of Japan.
Karnataka remains committed to extending its full support to Japanese enterprises to innovate, invest, expand and grow in the State!
#GIM2027 #InvestKarnataka #JETRO #KarnatakaDelegationInJapan
ಕರ್ನಾಟಕದಲ್ಲಿ ಜಪಾನ್ ಹೂಡಿಕೆಗೆ ಮತ್ತಷ್ಟು ಉತ್ತೇಜನ; ಜೆಟ್ರೋ (JETRO) ಜೊತೆ ಮಹತ್ವದ ಮಾತುಕತೆ!
ಜೆಟ್ರೋ (JETRO) ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶ್ರೀಮತಿ ಅಕಿಕೊ ಒಕುಮುರಾ (Ms. Akiko Okumura) ಅವರೊಂದಿಗೆ ಮಹತ್ವದ ಸಭೆ ನಡೆಸಿ, ಕರ್ನಾಟಕ ಮತ್ತು ಜಪಾನ್ ನಡುವಿನ ಆರ್ಥಿಕ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದೆವು.
ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಜಪಾನಿನ ಕಂಪನಿಗಳಿಗೆ ಅನುಕೂಲವಾಗುವಂತೆ ಅಗತ್ಯವಾದ ಪರಿಸರ ವ್ಯವಸ್ಥೆ ಕಲ್ಪಿಸುವುದು, ಜಪಾನಿ ಶಾಲೆ ಸ್ಥಾಪನೆಗೆ ಜಪಾನಿ ಕೈಗಾರಿಕಾ ಟೌನ್ಶಿಪ್ ಸಮೀಪ ಸೂಕ್ತ ನಾಗರಿಕ ಸೌಲಭ್ಯ ನಿವೇಶನ (CA Site) ಗುರುತಿಸುವುದು ಹಾಗೂ ರಾಜ್ಯದ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮಹತ್ವದ ವಿಷಯಗಳು ಚರ್ಚೆಯಾದವು.
ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶ-2027ಕ್ಕೆ ಜೆಟ್ರೋ ಸಂಸ್ಥೆಯ ನಾಯಕತ್ವವನ್ನು ಆಹ್ವಾನಿಸುವುದರ ಜೊತೆಗೆ, ಜಪಾನ್ ರಾಯಭಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಜಪಾನ್ ಕಂಟ್ರಿ ರೌಂಡ್ಟೇಬಲ್ ಆಯೋಜಿಸುವಂತೆಯೂ ಆಹ್ವಾನ ನೀಡಿದೆ.
ಜಪಾನ್ ನ ತಂತ್ರಜ್ಞಾನ, ಕರ್ನಾಟಕದ ಪ್ರತಿಭೆ ಮತ್ತು ಸರ್ಕಾರದ ಉದ್ಯಮಸ್ನೇಹಿ ನೀತಿಗಳು ಒಂದಾದಾಗ, ಹೂಡಿಕೆ, ಉದ್ಯೋಗ ಹಾಗೂ ಆರ್ಥಿಕ ಪ್ರಗತಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ!
#GIM2027 #InvestKarnataka #JETRO #KarnatakaDelegationInJapan
ಕರ್ನಾಟಕದಲ್ಲಿ ಜಪಾನ್ ಹೂಡಿಕೆಗೆ ಮತ್ತಷ್ಟು ಉತ್ತೇಜನ; ಜೆಟ್ರೋ (JETRO) ಜೊತೆ ಮಹತ್ವದ ಮಾತುಕತೆ!
ಜೆಟ್ರೋ (JETRO) ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶ್ರೀಮತಿ ಅಕಿಕೊ ಒಕುಮುರಾ (Ms. Akiko Okumura) ಅವರೊಂದಿಗೆ ಮಹತ್ವದ ಸಭೆ ನಡೆಸಿ, ಕರ್ನಾಟಕ ಮತ್ತು ಜಪಾನ್ ನಡುವಿನ ಆರ್ಥಿಕ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದೆವು.
ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಜಪಾನಿನ ಕಂಪನಿಗಳಿಗೆ ಅನುಕೂಲವಾಗುವಂತೆ ಅಗತ್ಯವಾದ ಪರಿಸರ ವ್ಯವಸ್ಥೆ ಕಲ್ಪಿಸುವುದು, ಜಪಾನಿ ಶಾಲೆ ಸ್ಥಾಪನೆಗೆ ಜಪಾನಿ ಕೈಗಾರಿಕಾ ಟೌನ್ಶಿಪ್ ಸಮೀಪ ಸೂಕ್ತ ನಾಗರಿಕ ಸೌಲಭ್ಯ ನಿವೇಶನ (CA Site) ಗುರುತಿಸುವುದು ಹಾಗೂ ರಾಜ್ಯದ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮಹತ್ವದ ವಿಷಯಗಳು ಚರ್ಚೆಯಾದವು.
ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶ-2027ಕ್ಕೆ ಜೆಟ್ರೋ ಸಂಸ್ಥೆಯ ನಾಯಕತ್ವವನ್ನು ಆಹ್ವಾನಿಸುವುದರ ಜೊತೆಗೆ, ಜಪಾನ್ ರಾಯಭಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಜಪಾನ್ ಕಂಟ್ರಿ ರೌಂಡ್ಟೇಬಲ್ ಆಯೋಜಿಸುವಂತೆಯೂ ಆಹ್ವಾನ ನೀಡಿದೆ.
ಜಪಾನ್ ನ ತಂತ್ರಜ್ಞಾನ, ಕರ್ನಾಟಕದ ಪ್ರತಿಭೆ ಮತ್ತು ಸರ್ಕಾರದ ಉದ್ಯಮಸ್ನೇಹಿ ನೀತಿಗಳು ಒಂದಾದಾಗ, ಹೂಡಿಕೆ, ಉದ್ಯೋಗ ಹಾಗೂ ಆರ್ಥಿಕ ಪ್ರಗತಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ!
#GIM2027 #InvestKarnataka #JETRO #KarnatakaDelegationInJapan
ಮುಖ್ಯಮಂತ್ರಿಗಳೊಂದಿಗೆ ಜಪಾನ್ ನಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯ ನಿಯೋಗ
ಜಾಗತಿಕ ತಂತ್ರಜ್ಞಾನ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಮತ್ತಷ್ಟು ಶಕ್ತಿ
ಕೈಗಾರಿಕೆಗಳ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಬೇಕು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಹೂಡಿಕೆ, ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ನಮ್ಮ ಸರ್ಕಾರದ ಸ್ಪಷ್ಟ ಸಂಕಲ್ಪವಾಗಿದೆ.
ಜಪಾನ್ನ ಪ್ರಸಿದ್ಧ ಟೊಯೋಟಾ ಮೊತೊಮಚಿ (Motomachi) ಕಾರ್ಖಾನೆಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭೇಟಿ ನೀಡಿ, ಅಲ್ಲಿನ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನ, ಕೈಗಾರಿಕಾ ಕಾರ್ಯವೈಖರಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಮಾದರಿಗಳನ್ನು ಅವಲೋಕಿಸಿದ್ದು ಮಹತ್ವದ ಅನುಭವವಾಗಿದೆ.
ಜಪಾನ್ನ ತಂತ್ರಜ್ಞಾನ ಮತ್ತು ಕೈಗಾರಿಕಾ ಪರಿಣತಿಯನ್ನು ಕರ್ನಾಟಕದ ಉದ್ಯಮ ವಲಯದೊಂದಿಗೆ ಬೆಸೆಯುವ ಮೂಲಕ ರಾಜ್ಯದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿ.
@CMofKarnataka @DKShivakumar
#BeyondBengaluru #karnatakadelegationinjapan
ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ಅಭಿಮಾನಿಗಳ ನೆಚ್ಚಿನ ‘ರೆಬಲ್ ಸ್ಟಾರ್’ ಡಾ. ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು.
ಮಾನವೀಯ ಮೌಲ್ಯಗಳಿಗೆ ಸ್ಪಂದಿಸುತ್ತಿದ್ದ ಅವರು ನಿಷ್ಕಲ್ಮಶ ಹೃದಯದವರಾಗಿದ್ದರು. ಶಾಸಕರಾಗಿ, ಸಂಸದರಾಗಿ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ನಾಡಿನ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ.
#Ambareesh #rebelstar
ನಾಡಿನ ಸಮಸ್ತ ಜನತೆಗೆ ಶ್ರೀ ಗುರುನಾನಕ್ ಜಯಂತಿಯ ಹಾರ್ದಿಕ ಶುಭಾಶಯಗಳು
ಸಮಾನತೆ, ಸಹೋದರತೆ ಹಾಗೂ ವಿಶ್ವಪ್ರೇಮದ ಸಂದೇಶವನ್ನು ಸಾರಿದ ಮಹಾನ್ ಸಂತ ಶ್ರೀ ಗುರುನಾನಕರಿಗೆ ಭಕ್ತಿಪೂರ್ವಕ ನಮನಗಳು.
ಅವರ ಬದುಕು, ಚಿಂತನೆಗಳು ಹಾಗೂ ಬೋಧನೆಗಳು ಸರ್ವಕಾಲಕ್ಕೂ ಸ್ಫೂರ್ತಿದಾಯಕ ಮತ್ತು ಅನುಕರಣೀಯ.
#GuruNanakJayanti
BLDE - ಸರ್ವಂ ಎಐ ಒಪ್ಪಂದ
ಉತ್ತರ ಕರ್ನಾಟಕದ ಎಐ ಕ್ರಾಂತಿಗೆ ವಿಜಯಪುರದಲ್ಲಿ ಮುನ್ನುಡಿ!
ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಬೆಂಗಳೂರು ಟೆಕ್ ಸಮ್ಮಿಟ್–2026ರಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರ ಸಮ್ಮುಖದಲ್ಲಿ ಸರ್ವಂ ಎಐ ಸಂಸ್ಥೆಯ ಸಹ-ಸಂಸ್ಥಾಪಕರಾದ ಶ್ರೀ ವಿವೇಕ್ ರಾಘವನ್ ಅವರೊಂದಿಗೆ ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಡಾ. ಫ. ಗು. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪನೆಯಾಗಲಿರುವ ಎಐ ಸಾಮರ್ಥ್ಯ ಕೇಂದ್ರವು:
✅ ವಿಜಯಪುರ ಹಾಗೂ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ AI, ಯಂತ್ರ ಕಲಿಕೆ ಮತ್ತು ಜನರೇಟಿವ್ AI ತರಬೇತಿ ನೀಡಲಿದೆ.
✅ ನಮ್ಮ ನೆಲದಲ್ಲೇ ನಾವೀನ್ಯತೆ ಮತ್ತು ನವೋದ್ಯಮ (Startups) ಅವಕಾಶಗಳನ್ನು ಸೃಷ್ಟಿಸಲಿದೆ.
✅ ಉತ್ತರ ಕರ್ನಾಟಕದ ಯುವಜನತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಮಹತ್ವದ ಮೈಲಿಗಲ್ಲಾಗಲಿದೆ.
✅ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ತಂತ್ರಜ್ಞಾನದ ಕನಸುಗಳು ಈಗ ವಿಜಯಪುರದ ಮಣ್ಣಿನಲ್ಲೂ ಅರಳುತ್ತಿವೆ. ವಿಜಯಪುರದ ಭವಿಷ್ಯಕ್ಕೆ ಇದು ದಿಟ್ಟ ಹೆಜ್ಜೆ!
ಈ ಸಂದರ್ಭದಲ್ಲಿ BLDE ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನೀಲಗೌಡ ಪಾಟೀಲ, BLDE ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಪಿ. ಮಂಜುನಾಥ, ಎಐ ಸಾಮರ್ಥ್ಯ ಕೇಂದ್ರದ ಅಧ್ಯಕ್ಷರಾದ ಡಾ. ಆರ್.ಪಿ.ಬಿ. ಕೋಟ್ನಾಳ, ಸದಸ್ಯ ಕಾರ್ಯದರ್ಶಿಗಳಾದ ಡಾ. ಪ್ರದೀಪ ವಿ. ಮಲಾಜಿ, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ಸರ್ವಂ ಎಐ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
#BengaluruTechSummit2026 | @PriyankKharge #BLDEA
ಅಪ್ಪಟ ಸುಳ್ಳುಗಾರ Mr. Bidari,
ಬಸವಣ್ಣನನ್ನು ಹೀಯಾಳಿಸಿರುವ ವ್ಯಕ್ತಿ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಟ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ.
ರಾಜಕಾರಣಿಗಳು ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವ ಇವರು 3-4 ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು, ಠೇವಣಿ ಕಳೆದುಕೊಂಡಿರುವ ಹೀನ ಮನಸ್ಸಿನ ವ್ಯಕ್ತಿಯಿಂದ ನಮ್ಮ ಸಮಾಜಕ್ಕೆ ಉಪದೇಶದ ಅವಶ್ಯಕತೆಯಿಲ್ಲ!
ನಮ್ಮ ಪೂರ್ವಜರು ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನೇ ಲಿಂಗರಾಜ ಫಂಡ್ ಮೂಲಕ ಸಮಾಜದ ಒಳಿತಿಗೆ-ಶಿಕ್ಷಣಕ್ಕೆ ದಾನ ನೀಡಿದವರು.
ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯ ಎಲ್ಲಾ ದಾನಗಳೂ ಗೊತ್ತಿವೆ.
ವಚನಪಿತಾಮಹ ಫ.ಗು. ಹಳಕಟ್ಟಿಯವರ ಕುರಿತು ನಾನು ಮಾಡಿರುವ ಕಾರ್ಯಗಳನ್ನು ಇಡೀ ನಾಡೇ ಗಮನಿಸುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ.
ತಾನು ಸತ್ಯವಂತ, ಬಸವಣ್ಣ ಅನುಯಾಯಿ ಎಂದೆಲ್ಲಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಬಿದರಿ ಬಗ್ಗೆ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಇವರು ಮಾಡಿರುವ ಅನಾಚಾರಗಳು, ಅನೈತಿಕ ಅವಾಂತರಗಳು ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಸಲಿದ್ದೇನೆ.
ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ಸಿದ್ದಗಂಗಾ ಹಿರಿಯ ಶ್ರೀಗಳನ್ನು ಭೇಟಿ ಮಾಡಿಸುವಂತೆ ಆ ಸಂದರ್ಭದಲ್ಲಿ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಎಂದು ಹೇಳಿರುವುದು ಹಸಿಸುಳ್ಳು, ನಾನು ಅವರ ಆಫೀಸಿಗೆ ಹೋಗಿಯೇ ಇಲ್ಲ...ಇದು ಅಪ್ಪಟ ಕಟ್ಟುಕಥೆ...!
ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ. ನನ್ನ ಆತ್ಮಗೌರವವನ್ನು ಬದಿಗಿಟ್ಟು ಯಾರ ಮುಂದೆಯೂ ತಲೆತಗ್ಗಿಸುವಂತಹ ಪ್ರಶ್ನೆಯೇ ಇಲ್ಲ!
Along with the Hon’ble Chief Minister, Shri D. K. Shivakumar, we visited the Motomachi Production Plant and the Toyota Kaikan Museum, where we gained valuable insights into the company’s advanced manufacturing processes, technological innovations, and future mobility solutions.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮೊಟೊಮಾಚಿ ಉತ್ಪಾದನಾ ಘಟಕ ಹಾಗೂ ಟೊಯೋಟಾ ಕೈಕನ್ ಮ್ಯೂಸಿಯಂಗೆ ಭೇಟಿ ನೀಡಿ, ಸಂಸ್ಥೆಯ ಸುಧಾರಿತ ಉತ್ಪಾದನಾ ಪ್ರಕ್ರಿಯೆಗಳು, ತಾಂತ್ರಿಕ ಆವಿಷ್ಕಾರಗಳು ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡೆವು.
@CMofKarnataka @DKShivakumar
#karnatakadelegationinjapan #Toyota




































