Commissioner of Police Mysuru retweeted
ದಿ.05.11.26 ಮಧ್ಯಾಹ್ನ 02.42ರಲ್ಲಿ ಯರಗನಹಳ್ಳಿ ಹೊಸ ಬಡಾವಣೆಯಲ್ಲಿ ವಯೋ ವೃಧ್ಧೆಯೊಬ್ಬರು ವಿಳಾಸ ಮರೆತು ಬಂದಿರುವುದಾಗಿ ಸಾರ್ವಜನಿಕರೊಬ್ಬರು 112ಗೆ ಕರೆಮಾಡಿದ 6 ನಿಮಷಕ್ಕೆ ಸ್ಥಳಕ್ಕೆ ಬಂದು ವಿಚಾರಿಸಿ, ಅವರ ಮಗನಿಗೆ ಕರೆ ಮಾಡಿ ಕರೆಸಿ ಜೊತೆಯಲ್ಲಿ ಕಳುಹಿಸಿ ಕ್ರಮವಹಿಸಿದ್ದಾರೆ #112emergency #mysore #mysuru
“ಟ್ರಿಪಲ್ ರೈಡಿಂಗ್ ಬೇಡ — ಸುರಕ್ಷತೆಯಲ್ಲಿ ಯಾವುದೇ ರಾಜಿ ಬೇಡ.”
“ಥ್ರಿಲ್‌ಗಾಗಿ ವೀಲಿಂಗ್ ಮಾಡಬೇಡಿ — ಜೀವಕ್ಕಾಗಿ ಸುರಕ್ಷಿತವಾಗಿ ಸವಾರಿ ಮಾಡಿ.”
“No Triple Riding. No Compromise on Safety.” “Don’t wheel for a thrill — ride for life.”
ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿದ್ದ ಬಗ್ಗೆ ದೂರು ನೀಡಿದ ಮೇರೆಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರು CEIR ಪೋರ್ಟಲ್ ಸಹಾಯದಿಂದ ಮೊಬೈಲ್ ಪತ್ತೆಮಾಡಿ ವಾರಸುದಾರರ ವಶಕ್ಕೆ ಹಿಂತಿರುಗಿಸಿದರು.
ಇಂದು ಮೈಸೂರಿನ ಮಾನಸ ಗಂಗೋತ್ರಿಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ವಿ.ವಿ.ಸಂಚಾರಿ ಪೊಲೀಸರಿಂದ ಸಂಚಾರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಮಹತ್ವ ಮತ್ತು ನಿಯಮಗಳ ಬಗ್ಗೆ ತಿಳಿಸಲಾಯಿತು. ನಿಯಮ ಮೀರಿದರೆ ಆಗುವ ಅಪಾಯಗಳನ್ನು ವಿವರಿಸಲಾಯಿತು.
ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, (1/2)
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಇಂದು ಮೈಸೂರು ನಗರದ ವಿವಿಧೆಡೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ-ಕಾಲೇಜು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಒಟ್ಟಾಗಿ ದೆಹಲಿಯಲ್ಲಿ ಮಾನ್ಯ ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ನಡೆದ ಏಕತಾ ದಿನದ ಕವಾಯತಿನ ನೇರಪ್ರಸಾರವನ್ನು ವೀಕ್ಷಿಸಿದರು. (1/3)
ಅಕ್ಟೋಬರ್ 31 ರ 'ರಾಷ್ಟ್ರೀಯ ಏಕತಾ ದಿನ'ದ ಪ್ರಯುಕ್ತ ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನಮನ ಸಲ್ಲಿಸಿ, ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ರಾಷ್ಟ್ರೀಯ ಏಕತಾ ಪ್ರತಿಜ್ಞಾವಿಧಿ ಸ್ವೀಕರಿಸಿದರು.











































