Devaraja siddapur 🪳 (@DevarajMS44) header
Devaraja siddapur 🪳 (@DevarajMS44) profile picture

ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ. ✌️#ಕನ್ನಡಿಗ

Dharwda
Joined January 2022
Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)
Devaraja siddapur 🪳 retweeted
KAS 319 Alert 🚨 @secretarykpsc @KEA_karnataka Prelims ಫಲಿತಾಂಶದಲ್ಲಿನ ಮೀಸಲಾತಿಯ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎನ್ನಲಾಗುತ್ತಿದೆ. ದಯವಿಟ್ಟು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಬೇಕು. ಆಕಾಂಕ್ಷಿಯೊಬ್ಬರು ಕಳುಹಿಸಿರುವ ಮೆಸೇಜ್: ಸಂವಿಧಾನದ ವಿಧಿ 371(ಜೆ) ಉಲ್ಲಂಘನೆ: ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸುವ 371(ಜೆ) ನಿಯಮಾವಳಿಗಳನ್ನು ಈ ಪ್ರಿಲಿಮ್ಸ್ ಕಟ್‌-ಆಫ್ (Cut-off) ಪಟ್ಟಿಯಲ್ಲಿ ಸರಿಯಾಗಿ ಪಾಲಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. 1.ಸಂವಿಧಾನದ 371(ಜೆ) ವಿಧಿಯನ್ನು ಜಾರಿಗೆ ತಂದಿರುವುದೇ ಐತಿಹಾಸಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚುವರಿ ರಕ್ಷಣೆ (Protective Discrimination) ನೀಡಲು. • ಸಾಮಾನ್ಯ ನಿಯಮ: ಯಾವುದೇ ಮೀಸಲಾತಿ ವ್ಯವಸ್ಥೆಯಲ್ಲಿ, ಮೀಸಲಾತಿ ವರ್ಗದ ಅಭ್ಯರ್ಥಿಯೊಬ್ಬ ಸಾಮಾನ್ಯ (RPC / General Merit) ಕಟ್‌ಆಫ್‌ಗಿಂತ ಹೆಚ್ಚಿನ ಅಂಕ ಪಡೆದರೆ, ಆತನನ್ನು ಮೊದಲು ಸಾಮಾನ್ಯ ಪಟ್ಟಿಯಲ್ಲಿ (RPC ವೃಂದ) ಪರಿಗಣಿಸಬೇಕು.ಇದರಿಂದ ಮೀಸಲಾತಿ ಕೋಟಾದ (KK ವೃಂದ) ಸ್ಥಾನಗಳು ಕಡಿಮೆ ಅಂಕ ಪಡೆದ ಇತರ ಅರ್ಹ ಸ್ಥಳೀಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತವೆ. ಆಗಿರುವ ಅನ್ಯಾಯ: ಪ್ರಸ್ತುತ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಅಭ್ಯರ್ಥಿಗಳು RPC ಕಟ್‌ಆಫ್‌ಗಿಂತ ಹೆಚ್ಚು ಅಂಕ ಪಡೆದಿದ್ದರೂ, ಅವರನ್ನು ಮೊದಲೇ KK ಪಟ್ಟಿಗೆ ಸೀಮಿತಗೊಳಿಸಲಾಗಿದೆ. ಇದರಿಂದ KK ಕೋಟಾದ ಸೀಟುಗಳು ಪ್ರತಿಭಾವಂತರಿಂದಲೇ ತುಂಬಿಹೋಗಿ, ಕಟ್‌ಆಫ್ ಅಂಕಗಳು ಗಗನಕ್ಕೇರಿವೆ. ಇದು ಮೀಸಲಾತಿಯನ್ನೇ ಒಂದು “ಶಾಪ”ವನ್ನಾಗಿಮಾರ್ಪಡಿಸಿದಂತಾಗಿದೆ. 2. ‘ಸ್ಕ್ರೀನಿಂಗ್ ಟೆಸ್ಟ್’ (ಪೂರ್ವಭಾವಿ ಪರೀಕ್ಷೆ) ತತ್ವದ ಉಲ್ಲಂಘನೆ ಪೂರ್ವಭಾವಿ ಪರೀಕ್ಷೆಯು ಕೇವಲ ಅರ್ಹತಾ ಪರೀಕ್ಷೆ (Screening Test) ಮಾತ್ರ. ಇಲ್ಲಿ ಯಾವುದೇ ಹುದ್ದೆಯನ್ನಾಗಲಿ ಅಥವಾ ವೃಂದವನ್ನಾಗಲಿ (Cadre) ಹಂಚಿಕೆ ಮಾಡಲಾಗುವುದಿಲ್ಲ. 1:15 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವಾಗ, ಎರಡೂ ವೃಂದಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯು RPC ವೃಂದದ ಅರ್ಹತಾ ಮಾನದಂಡವನ್ನು ತಲುಪಿದ್ದರೆ, ಆತನನ್ನು RPC ಪಟ್ಟಿಯಲ್ಲಿಯೇ ಪರಿಗಣಿಸಬೇಕು. • ಆದರೆ ಕೆಪಿಎಸ್‌ಸಿಯು ಅಂತಿಮ ಆಯ್ಕೆ ಪಟ್ಟಿಯ (Final Selection List) ಹಂತದಲ್ಲಿ ಅನ್ವಯಿಸಬೇಕಾದ ‘ವೃಂದದ ಆದ್ಯತೆ’ (Cadre Preference) ನಿಯಮವನ್ನು ಪೂರ್ವಭಾವಿ ಪರೀಕ್ಷೆಯ ಹಂತದಲ್ಲೇ ಅನ್ವಯಿಸಿದೆ. ಇದು ನೇಮಕಾತಿ ನಿಯಮಗಳ ತಪ್ಪು ವ್ಯಾಖ್ಯಾನವಾಗಿದೆ. 3. ‘ಮೆರಿಟ್’ (ಪ್ರತಿಭೆ) ಆಧಾರಿತ ಆಯ್ಕೆಗೆ ಕತ್ತರಿ ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳ ಪ್ರಕಾರ (ಉದಾಹರಣೆಗೆ: ಇಂದಿರಾ ಸಾಹ್ನಿ ಪ್ರಕರಣ), ಮೀಸಲಾತಿ ವರ್ಗದ ಅಭ್ಯರ್ಥಿಯು ತನ್ನ ಸ್ವಂತ ಪ್ರತಿಭೆಯಿಂದ (Merit) ಸಾಮಾನ್ಯ ವರ್ಗದ ಸ್ಥಾನವನ್ನು ಪಡೆಯಲು ಅರ್ಹನಿದ್ದರೆ, ಆತನನ್ನು ಮೀಸಲಾತಿ ಕೋಟಾದಲ್ಲಿ ಎಣಿಸಬಾರದು. • ಉದಾಹರಣೆಗೆ: GM ಗ್ರಾಮೀಣ ವಿಭಾಗದಲ್ಲಿ RPC ಕಟ್‌ಆಫ್ 198.5 ಇದ್ದರೆ, KK ಕಟ್‌ಆಫ್ 215.5 ಆಗಿದೆ (ಬರೋಬ್ಬರಿ 17 ಅಂಕಗಳ ವ್ಯತ್ಯಾಸ!). • ಇದರ ಅರ್ಥವೇನೆಂದರೆ: ಕಲ್ಯಾಣ ಕರ್ನಾಟಕದ ಗ್ರಾಮೀಣ ಅಭ್ಯರ್ಥಿಯೊಬ್ಬ 214 ಅಂಕ ಪಡೆದಿದ್ದರೂ ಆತ ಮುಖ್ಯ ಪರೀಕ್ಷೆಗೆ ಅನರ್ಹನಾಗುತ್ತಾನೆ; ಅದೇ ಬೆಂಗಳೂರು ಅಥವಾ ಮೈಸೂರು ಭಾಗದ (RPC) ಅಭ್ಯರ್ಥಿಯೊಬ್ಬ 199 ಅಂಕ ಪಡೆದರೂ ಮುಖ್ಯ ಪರೀಕ್ಷೆಗೆ ಅರ್ಹನಾಗುತ್ತಾನೆ! ಇದು ಸಮಾನತೆಯ ಹಕ್ಕಿನ (Article 14 & 16) ನೇರ ಉಲ್ಲಂಘನೆಯಾಗಿದೆ. 4. ಸ್ಥಳೀಯ ಅಭ್ಯರ್ಥಿಗಳಿಗೆ “ದ್ವಿಮುಖ ಅವಕಾಶ” (Dual Opportunity) ನಿರಾಕರಣೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ರಾಜ್ಯದ ಉಳಿದ ಭಾಗದ (RPC) ಹುದ್ದೆಗಳಿಗೂ ಸ್ಪರ್ಧಿಸುವ ಹಕ್ಕಿದೆ, ಜೊತೆಗೆ ತಮ್ಮ ಭಾಗದ (KK) ಮೀಸಲು ಹುದ್ದೆಗಳಿಗೂ ಸ್ಪರ್ಧಿಸುವ ಹಕ್ಕಿದೆ. • ಅಭ್ಯರ್ಥಿಗಳು ಎರಡೂ ವೃಂದಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ್ದಾರೆ. • ಪೂರ್ವಭಾವಿ ಪರೀಕ್ಷೆಯ ಹಂತದಲ್ಲೇ ಅವರನ್ನು ಕೇವಲ KK ವೃಂದಕ್ಕೆ ಕಟ್ಟಿಹಾಕುವ ಮೂಲಕ, RPC ವೃಂದದಲ್ಲಿ ಅವರಿಗೆ ಸಿಗಬೇಕಿದ್ದ ನ್ಯಾಯಯುತ ಅವಕಾಶವನ್ನು ಕೆಪಿಎಸ್‌ಸಿ ಕಸಿದುಕೊಂಡಿದೆ. ಇದರಿಂದ ಒಟ್ಟು 1:15 ಅನುಪಾತದಲ್ಲಿ ಕಲ್ಯಾಣ ಕರ್ನಾಟಕದ ನೂರಾರು ಅರ್ಹ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. 5. ಸರ್ಕಾರಿ ಸುತ್ತೋಲೆ ಮತ್ತು ಶಾಸನಬದ್ಧ ನಿಯಮಗಳ ಸಂಘರ್ಷ 15-06-2022ರ ಸರ್ಕಾರಿ ಸುತ್ತೋಲೆಯು ಕೇವಲ ಆಡಳಿತಾತ್ಮಕ ಕಾರ್ಯವಿಧಾನಕ್ಕೆ (Executive Instruction) ಸಂಬಂಧಿಸಿದ್ದಾಗಿದೆ. • ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ಮತ್ತು ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ನಿಯಮಗಳು ಶಾಸನಬದ್ಧವಾಗಿವೆ. • ಸುಪ್ರೀಂ ಕೋರ್ಟ್‌ನ ಸಂತ್ ರಾಮ್ ಶರ್ಮಾ ಪ್ರಕರಣದ ತೀರ್ಪಿನಂತೆ, ಯಾವುದೇ ಒಂದು ಸುತ್ತೋಲೆಯು ಮೂಲ ಕಾನೂನಿನ ಆಶಯವನ್ನು ಬದಲಿಸಲು ಅಥವಾ ಅಭ್ಯರ್ಥಿಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ಇತ್ತೀಚಿನ ಅಖಂಡಪ್ಪ ರೇವಡಿ ಪ್ರಕರಣದ (2026) ತೀರ್ಪು ಕೂಡ ವೃಂದ ಹಂಚಿಕೆಯಲ್ಲಿನ ಇಂತಹ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸ್ಪಷ್ಟ ನಿರ್ದೇಶನ ನೀಡಿದೆ. 6. ಸಂಖ್ಯಾತ್ಮಕ ನಷ್ಟದ ಅಂದಾಜು KK ವೃಂದಕ್ಕೆ ಇರುವುದು ಕೇವಲ 22 ಹುದ್ದೆಗಳು (1:15 ಅನುಪಾತದಂತೆ ಸುಮಾರು 330 ಅಭ್ಯರ್ಥಿಗಳು). RPC ವೃಂದಕ್ಕೆ 297 ಹುದ್ದೆಗಳಿವೆ (ಸುಮಾರು 4,455 ಅಭ್ಯರ್ಥಿಗಳು). • ಕಲ್ಯಾಣ ಕರ್ನಾಟಕದ ಟಾಪ್ 140-200 ಅಭ್ಯರ್ಥಿಗಳು RPC ಕಟ್‌ಆಫ್‌ಗಿಂತ ಹೆಚ್ಚು ಅಂಕ ಪಡೆದಿದ್ದಾರೆ. ಅವರನ್ನು RPC ಪಟ್ಟಿಗೆ ಸೇರಿಸಿದ್ದರೆ, KK ವೃಂದದ ಸ್ಥಾನಗಳು ಕಲ್ಯಾಣ ಕರ್ನಾಟಕದ ಮುಂದಿನ ಹಂತದ 330 ಅಭ್ಯರ್ಥಿಗಳಿಗೆ ಸಿಗುತ್ತಿದ್ದವು. • ಈಗ ಟಾಪ್ ಅಭ್ಯರ್ಥಿಗಳನ್ನೇ KK ಪಟ್ಟಿಗೆ ತುಂಬಿರುವುದರಿಂದ, ಕಲ್ಯಾಣ ಕರ್ನಾಟಕದ ಸುಮಾರು 200 ರಿಂದ 300 ಅರ್ಹ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಅವಕಾಶವನ್ನು ಕಳೆದುಕೊಂಡಿದ್ದಾರೆ. 📌 ಮುಂದಿನ ಹೆಜ್ಜೆ ಏನಾಗಬೇಕು? ಈ ಹಿನ್ನೆಲೆಯಲ್ಲಿ KPSCಯು ಅಭ್ಯರ್ಥಿಗಳ ವೃಂದದ ಆಯ್ಕೆಗಳು, ವೈಯಕ್ತಿಕ ಅಂಕಗಳು, 1:15 ಆಯ್ಕೆ ವಿಧಾನ ಮತ್ತು ಅನ್ವಯಿಸಿರುವ ಮೀಸಲಾತಿ ನಿಯಮಗಳನ್ನು ಮತ್ತೊಮ್ಮೆ Cross-Verify ಮಾಡುವುದು ಸೂಕ್ತ. ಯಾವುದೇ ಅರ್ಹ KK ಅಭ್ಯರ್ಥಿಗೆ RPC ಮೆರಿಟ್ ಪಟ್ಟಿಯಲ್ಲಿ ಸಿಗಬೇಕಾದ ಅವಕಾಶ ತಪ್ಪಿಹೋಗಿದೆಯೇ ಎಂಬುದನ್ನು ಪರಿಶೀಲಿಸಿ, ನಿಯಮಗಳಲ್ಲಿ ಲೋಪ ಕಂಡುಬಂದರೆ ಅಗತ್ಯ ತಿದ್ದುಪಡಿ ಕೈಗೊಳ್ಳಬೇಕು. ಇದು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳ ಸಮಾನ ಅವಕಾಶ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯವಾಗಿದೆ.
14
25
3
47
6,204
Devaraja siddapur 🪳 retweeted
ಹಾಲಸಮುದ್ರ ಘಟನೆ ನಡೆದ ಸಮಯದಲ್ಲಿ ಊರಲ್ಲೇ ಇಲ್ಲದ ನಮ್ಮ ವಾಲ್ಮೀಕಿ ಸಮುದಾಯದ ಅಮಾಯಕ ಯುವಕರ ಮೇಲೆಯೂ ಸುಳ್ಳು ಕೇಸ್ ದಾಖಲಿಸಿದ್ದಾರೆ!ಇದರ ಬಗ್ಗೆ ಮೊಬೈಲ್ ಟವರ್ ಲೊಕೇಶನ್ ಮತ್ತು ಸಿಸಿಟಿವಿ ಸಾಕ್ಷ್ಯಗಳನ್ನು ಪರಿಶೀಲಿಸಿ, ಅಮಾಯಕ ಯುವಕರ ಹೆಸರನ್ನು FIR ನಿಂದ ತಕ್ಷಣಕೈಬಿಡಬೇಕು.@CMofKarnataka @DgpKarnataka @spkoppal #StopFalseCases
6
6
546
Devaraja siddapur 🪳 retweeted
ಹಲ್ಲೆ ನಡೆಸಿದವರೇ, ಈಗ ತಮ್ಮ ತಪ್ಪನ್ನು ಮರೆಮಾಚಲು ಊರುನಲಿ ಇಲ್ಲದವರು ಮೇಲೆ ನಮ್ಮವರ ವಿರುದ್ಧವೇ ಸುಳ್ಳು ಪ್ರತಿದೂರು (Counter-case) ದಾಖಲಿಸಿದ್ದಾರೆ ದೌರ್ಜನ್ಯಕ್ಕೆ ಒಳಗಾದವರಿಗೇ ಶಿಕ್ಷೆ ನೀಡುವ ಈ ಹುನ್ನಾರವನ್ನು ಮಾಡಲಾಗಿದೆ.@SPKoppala @DgpKarnataka @osd_cmkarnataka @CMofKarnataka @JarkiholiSatish @Raghumurthy_INC
7
11
381
ಹೊಗ್ಗಟ್ಟಿನ ಹೋರಾಟ ದಿಂದ ಮಾತ್ರ ನ್ಯಾಯ ಸಿಗುತ್ತೆ ನಮ್ಮವರೇ ಅವರ ಪರವಾಗಿ ಇದ್ದರೆ ನ್ಯಾಯ ಸಿಗೋದು ಕಷ್ಟ ಆಗುತ್ತೆ
1
1
64
Devaraja siddapur 🪳 retweeted
Replying to @ncsthq
ಹಾಲಸಮುದ್ರದಲ್ಲಿ ನಮ್ಮ ವಾಲ್ಮೀಕಿ ಸಮುದಾಯದ ಮೇಲೆ ದಬ್ಬಾಳಿಕೆ ಮತ್ತು ಹಲ್ಲೆ ನಡೆಸಿದವರೇ, ಈಗ ತಮ್ಮ ತಪ್ಪನ್ನು ಮರೆಮಾಚಲು ನಮ್ಮವರ ವಿರುದ್ಧವೇ ಸುಳ್ಳು ಪ್ರತಿದೂರು (Counter-case) ದಾಖಲಿಸಿದ್ದಾರೆ ದೌರ್ಜನ್ಯಕ್ಕೆ ಒಳಗಾದವರಿಗೇ ಶಿಕ್ಷೆ ನೀಡುವ ಈ ಹುನ್ನಾರವನ್ನು @CMofKarnataka ಮತ್ತು @DgpKarnataka ತಕ್ಷಣ ತಡೆಯಬೇಕು.
3
3
27
Devaraja siddapur 🪳 retweeted
KEA ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿರುವುದು ಶ್ಲಾಘನೀಯ.ಆದರೆ ನೂರಾರು ಕಿ.ಮೀ ದೂರದ ಜಿಲ್ಲೆಗಳಿಗೆ ಪರೀಕ್ಷಾ ಕೇಂದ್ರ ನೀಡುತ್ತಿರುವುದರಿಂದ ಬಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರಯಾಣ, ವಸತಿ ವೆಚ್ಚ ಭರಿಸಲಾಗದೆ ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ.ದಯವಿಟ್ಟು ತವರು ಅಥವಾ ಪಕ್ಕದ ಜಿಲ್ಲೆಯಲ್ಲೇ ಕೇಂದ್ರ ನೀಡಿ. @KEA_karnataka
4
4
114
Devaraja siddapur 🪳 retweeted
Replying to @STWelfareDept
ಹಾಲಸಮುದ್ರದಲ್ಲಿ ನಮ್ಮ ವಾಲ್ಮೀಕಿ ಸಮುದಾಯದ ಮೇಲೆ ದಬ್ಬಾಳಿಕೆ ಮತ್ತು ಹಲ್ಲೆ ನಡೆಸಿದವರೇ, ಈಗ ತಮ್ಮ ತಪ್ಪನ್ನು ಮರೆಮಾಚಲು ನಮ್ಮವರ ವಿರುದ್ಧವೇ ಸುಳ್ಳು ಪ್ರತಿದೂರು (Counter-case) ದಾಖಲಿಸಿದ್ದಾರೆ ದೌರ್ಜನ್ಯಕ್ಕೆ ಒಳಗಾದವರಿಗೇ ಶಿಕ್ಷೆ ನೀಡುವ ಈ ಹುನ್ನಾರವನ್ನು @CMofKarnataka ಮತ್ತು @DgpKarnataka ತಕ್ಷಣ ತಡೆಯಬೇಕು.
4
6
61
Devaraja siddapur 🪳 retweeted
6
6
193
Devaraja siddapur 🪳 retweeted
ಹಾಲಸಮುದ್ರದಲ್ಲಿ ನಮ್ಮ ವಾಲ್ಮೀಕಿ ಸಮುದಾಯದ ಮೇಲೆ ದಬ್ಬಾಳಿಕೆ ಮತ್ತು ಹಲ್ಲೆ ನಡೆಸಿದವರೇ, ಈಗ ತಮ್ಮ ತಪ್ಪನ್ನು ಮರೆಮಾಚಲು ನಮ್ಮವರ ವಿರುದ್ಧವೇ ಸುಳ್ಳು ಪ್ರತಿದೂರು (Counter-case) ದಾಖಲಿಸಿದ್ದಾರೆ ದೌರ್ಜನ್ಯಕ್ಕೆ ಒಳಗಾದವರಿಗೇ ಶಿಕ್ಷೆ ನೀಡುವ ಈ ಹುನ್ನಾರವನ್ನು @CMofKarnataka ಮತ್ತು @DgpKarnataka ತಕ್ಷಣ ತಡೆಯಬೇಕು.
3
11
2
14
800
Devaraja siddapur 🪳 retweeted
Dear @KEA_karnataka #KPSC ಅಧಿಕೃತ Website ನಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳ ಮಾಹಿತಿ ಇದೆ. ಅದೇ ರೀತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳ ಮಾಹಿತಿಗಾಗಿ ತಮ್ಮ ಅಧಿಕೃತ #KEA Website ನಲ್ಲಿ ಪ್ರಸ್ತುತ ನೇಮಕಾತಿಗೆ ಇಲಾಖೆವಾರು ಪ್ರಸ್ತಾವನೆ ಸಲ್ಲಿಸಿರುವ ಹುದ್ದೆಗಳ ಮಾಹಿತಿಯನ್ನು ಒದಗಿಸಬೇಕಾಗಿ ವಿನಂತಿ.. ಇದರಿಂದ ಮುಂಬರುವ ನೇಮಕಾತಿಗಳ ಬಗ್ಗೆ ಅಭ್ಯರ್ಥಿಗಳಿಗೆ ನಿಖರ ಮಾಹಿತಿ ದೊರಯಲಿದೆ. #KEA #KPSC @secretarykpsc @KEA_karnataka @INCKarnataka @DKShivakumar @CMofKarnataka
6
23
1
88
17,160
Devaraja siddapur 🪳 retweeted
ಬಸವಣ್ಣನವರ ಆಶಯದ ಲಿಂಗಾಯತ ತತ್ವ ಯಾವತ್ತೋ ಮಣ್ಣು ಪಾಲಾಯ್ತು ಇವಾಗ ಏನೇ ಇದ್ರೂ ಡಾಂಭಿಕತೆ ಮಾತ್ರ. ಇದರಿಂದ ಯಾವುದೇ ಸಮುದಾಯ ಹೊರತಾಗಿಲ್ಲ. ಅವ್ರು ಆ ರೀತಿ ದಾಳಿ ಮಾಡುತ್ತಿದ್ರೆ ಇವ್ರುಗಳು ಯಾಕೆ ಸುಮ್ಮನಿದ್ದಾರೆ.
1
1
2
176
Replying to @happypatil0
ನೀನ್ಯಾವನೋ ನೀನು? ಒಳ್ಳೆ ಹಾರ್ಡ್ಕೋರ್ ಸಂಘಿತರ ಆಡ್ತೀಯಲ್ಲಾ? ಮೇಲ್ವರ್ಗ ಕೆಳವರ್ಗ?? ಸ್ವಲ್ಪ ಕನಿಷ್ಠ ಆದ್ರೂ ವೈಚಾರಿಕತೆಯಿಂದ ಮಾತಾಡಪ್ಪ..
1
3
125
Devaraja siddapur 🪳 retweeted
Replying to @happypatil0
ಇಲ್ಲಿ 'ಮೇಲ್ವರ್ಗ-ಕೆಳವರ್ಗ' ಎಂದು ಜಾತಿ ಬಣ್ಣ ಕಟ್ಟಿ ಅನುಕಂಪ ಗಿಟ್ಟಿಸುವ ಅಗತ್ಯವಿಲ್ಲ,,ಆ ಊರಿನಲ್ಲಿ ವಾಲ್ಮೀಕಿ ವಿಗ್ರಹ ಸ್ಥಾಪನೆ ವಿಚಾರವಾಗಿ ಮೊದಲಿನಿಂದಲೂ ನಡೆಯುತ್ತಿರುವ ವಿವಾದವೇ ಈ ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣ,.ಪೋಲಿಸ್ ಕೇಸ್ ಗಳಿಂದ ತಪ್ಪಿಸಿಕೊಳ್ಳಲು ಹುಡುಕಿರುವ ಸುಳ್ಳು,ಪೂರ್ಣ ಸತ್ಯತಿಳಿಯದೆ ಏಕಪಕ್ಷೀಯವಾಗಿ ಸುಳ್ಳು ಹರಡಬೇಡಿ
1
2
99
Devaraja siddapur 🪳 retweeted
Replying to @happypatil0
ಈಗ ಕೇಸ್ ಗಳಿಂದ ನೀವು ತಪ್ಪಿಸಿಕೊಳ್ಳಲು ಹುಡುಕಿರುವ ಸುಳ್ಳು ಇದು,,,
1
2
95
ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ ಮುಂದೆ ನನ್ನ ಬೈದವರೆಲ್ಲಾ ಅಂದಣವೇರಲಿ ಕುಂದು ಇಟ್ಟವರೆಲ್ಲ ಕುದುರೆ ಕಟ್ಟಿಬಾಳಲಿ ಬಂದು ಒದ್ದವರಿಗೆಲ್ಲ ಭತ್ತದ ಗದ್ದೆ ಬೆಳೆಯಲಿ. ಏನು ಒಲ್ಲೆ ಹರಿಯೇ ಸ್ತುತಿಸಿ ನಿನ್ನನು ಜ್ಞಾನ ಭಕ್ತಿ ಕೊಡು ಎಮಗದೊಂದೆ ದೊಡ್ಡದು. ದಾಸ ಶ್ರೇಷ್ಠ ಕನಕದಾಸ ಜಯಂತಿಯ ಶುಭಾಷಯಗಳು. #ಕನಕದಾಸಜಯಂತಿ 🙏🙏
10
24
374
Devaraja siddapur 🪳 retweeted
ನಾನು ಎಂಬುದು ಹೋದರೆ, ನೀನು ಎಂಬುದು ಉಳಿಯುವುದು. ಅಹಂಕಾರವನ್ನು ತೊರೆದು, ಭಕ್ತಿ ಮತ್ತು ಸರಳತೆಯ ದಾರಿ ತೋರಿದ ಸಂತ ಕವಿ ಕನಕದಾಸರ ಜಯಂತಿಯ ಶುಭಾಶಯಗಳು. 💐💐 #ಕನಕದಾಸಜಯಂತಿ #ಕನಕದಾಸರು #ಕನಕಜಯಂತಿ
3
14
352
Devaraja siddapur 🪳 retweeted
ಜೀವ ಉಳಿಸುವ ರಕ್ತದಾನವೇ ಶ್ರೇಷ್ಠ ದಾನ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ, ಹಿರಿಯೂರು ಬೋಧಿ ಸೆಂಟರ್ ಫಾರ್ ಲರ್ನಿಂಗ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದೆನು. 1/2
1
1
1
88
Devaraja siddapur 🪳 retweeted
ಕನ್ನಡವೆಂದರೆ ಕನ್ನಡಿಗರ ಬದುಕು ಕನ್ನಡಿಗರ ಬದುಕು ನಾಶವಾದರೆ ಕನ್ನಡವೇ ನಾಶವಾಗುತ್ತದೆ ಬನ್ನಿ, ಕನ್ನಡಿಗರ ಉಳಿವಿಗಾಗಿ ಹೋರಾಡೋಣ #ಕರವೇ #ಕರವೇಹೋರಾಟಗಳು #ಕನ್ನಡಿಗರಿಗೆಉದ್ಯೋಗ #KannadigasInITBT #JobsForKannadigas #ಆಗ್ರಹಅಭಿಯಾನ #karave #krv
1
17
51
567