ಕ್ರಾಂತಿಕಾರಕ ಯೋಜನೆಗಳು, ದಿಟ್ಟ ನಿರ್ಧಾರಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಭಾರತದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ, ಭಾರತ ರತ್ನ ಪುರಸ್ಕೃತರಾದ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ
ಅಖಂಡ ಭಾರತವನ್ನು ಏಕೀಕರಣಗೊಳಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಬೆಳಕಿನ ಹಬ್ಬವಾದ ದೀಪಾವಳಿಯು ನಿಮ್ಮ ಬಾಳನ್ನು ಸಂಪತ್ತು, ಸಮೃದ್ಧಿಯಿಂದ ಬೆಳಗಲಿ ಎಂದು ಆಶಿಸುತ್ತೇನೆ.
ಇಂದು ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ "ಅಭಿಮಾನದ ಅಭಿನಂದನೆ" ಸ್ವೀಕರಿಸಿ ಮಾತನಾಡಿದೆ.
ನಾಡಿನ ಸಮಸ್ತ ಜನರಿಗೆ ವಿಜಯದ ಸಂಕೇತ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.
ಈ ಹಬ್ಬವು ಎಲ್ಲರಿಗೂ ಇನ್ನಷ್ಟು ಖುಷಿ, ನೆಮ್ಮದಿ ಹೆಚ್ಚಿಸಲಿ, ಅನ್ನದಾತರ ಬಾಳು ಹಸನುಗೊಳಿಸಲಿ
ನಾಡಿನ ಎಲ್ಲ ನಾಗರಿಕರಿಗೂ ಆಯುಧ ಪೂಜೆಯ ಶುಭಾಶಯಗಳು.
ಈ ಹಬ್ಬವು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಆಶಿಸುತ್ತೇನೆ.
"ಜೈ ಜವಾನ್, ಜೈ ಕಿಸಾನ್” ಎಂಬ ಘೋಷವಾಕ್ಯದ ಮೂಲಕ ದೇಶದ ರೈತರಿಗೆ ಸ್ಪೂರ್ತಿ ತುಂಬಿದ ಮಾಜಿ ಪ್ರಧಾನಿಗಳು, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಮನದುಂಬಿ ಸ್ಮರಿಸುತ್ತೇನೆ.
ಭಾರತದ ಸ್ವಾತಂತ್ರ್ಯ ಚಳವಳಿಯ ಹರಿಕಾರ, ಪರಕೀಯರ ಆಡಳಿತದಲ್ಲಿದ್ದ ದೇಶಗಳ ಸ್ವಾತಂತ್ರ್ಯ ಚಳುವಳಿಗಳಿಗೆ ಸ್ಫೂರ್ತಿ ಕೊಟ್ಟ ಮಹಾನ್ ನಾಯಕ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿಯಂದು ಮನದುಂಬಿ ಸ್ಮರಿಸುತ್ತೇನೆ.
ಗಾಂಧಿ ಮಾರ್ಗ, ಸತ್ಯ ಮಾರ್ಗ-ಇದೇ ಹಾದಿಯಲ್ಲಿ ಎಲ್ಲರೂ ಸಾಗೋಣ.
ಕಲ್ಯಾಣ ಕರ್ನಾಟಕ ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವದ ಶುಭಾಶಯಗಳು.
ಭಾರತದ ಒಕ್ಕೂಟಕ್ಕೆ ನಮ್ಮ ಭಾಗವನ್ನು ಸೇರಿಸುವ ನಿಟ್ಟಿನಲ್ಲಿ ನಡೆಸಿದ ವಿಮೋಚನಾ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
ಈ ಹಬ್ಬವು ಶಾಂತಿ, ಸಾಮರಸ್ಯ, ಸೌಹಾರ್ದತೆ ಮೂಡಿಸಲಿ ಎಂದು ಆಶಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಘ್ನನಿವಾರಕ ಎಲ್ಲರ ಬಾಳಲ್ಲೂ ಸುಖ, ಶಾಂತಿ, ಸಂತೋಷ ಮತ್ತು ನೆಮ್ಮದಿ ತಂದು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು
ಈ ಹಬ್ಬವು ಸರ್ವರಿಗೂ ಸುಖ ಶಾಂತಿ ನೆಮ್ಮದಿ ತರಲಿ ಎಂದು ಆಶಿಸುತ್ತೇನೆ
ಅನಾಥರ, ಬಡವರ ಹಾಗೂ ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ, ಭಾರತ ರತ್ನ ಪುರಸ್ಕೃತರಾದ ಮದರ್ ತೆರೇಸಾ ಅವರ ಜಯಂತಿಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ.
ಇಂದು ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಉದ್ಘಾಟನ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾದ @DKShivakumar ಅವರೊಂದಿಗೆ ಭಾಗವಹಿಸಿದೆ.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಫೆಲೋಶಿಪ್ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗು ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ @S_PrakashPatil , @PriyankKharge ಹಾಗು ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
1
102
ಕ್ರಾಂತಿಕಾರಿ ಆಲೋಚನೆಗಳ ಮೂಲಕ ಆಧುನಿಕ ಭಾರತದ ಕನಸನ್ನು ನನಸು ಮಾಡಿ, ದೇಶವನ್ನು ಸರ್ವತೋಮುಖ ಅಭಿವೃದ್ಧಿಪಥದಲ್ಲಿ ನಡೆಸಿದ ಮಾಜಿ ಪ್ರಧಾನಿಗಳು,
ಭಾರತರತ್ನ ಪುರಸ್ಕೃತರಾದ ರಾಜೀವ್ ಗಾಂಧಿ ಅವರ ಜಯಂತಿಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ
ವೃದ್ಧಾಪ್ಯ ವೇತನ, ಭಾಗ್ಯಜ್ಯೋತಿ, ಉಚಿತ ನಿವೇಶನ ಯೋಜನೆಗಳನ್ನು ಜಾರಿಗೆ ತಂದ, ಬಡವರಿಗಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿದ,
ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಯಂತಿಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ.
ರಕ್ಷಾಬಂಧನ ಸೋದರತ್ವದ ಸಂಕೇತ. ಸಮಾಜದಲ್ಲಿ ಜಾತಿ, ಧರ್ಮಗಳನ್ನು ಮೀರಿ ಸಂಬಂಧಗಳು ಗಟ್ಟಿಗೊಂಡು, ಶಾಂತಿ ಸೌಹಾರ್ದತೆ ಶಾಶ್ವತವಾಗಿ ನೆಲೆಸಲಿ ಎಂದು ಹಾರೈಸುತ್ತೇನೆ.
ನಾಡಿನ ಸಮಸ್ತ ಸಹೋದರ ಸಹೋದರಿಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯಗಳು
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ, ಸಿಡಿಲಬ್ಬರದ ಮಾತುಗಳಿಂದ ಪ್ರತಿಯೊಬ್ಬರಲ್ಲೂ ದೇಶ ಪ್ರೇಮದ ಕಿಚ್ಚು ಹಚ್ಚಿಸಿದ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

























