Construction Workers Welfare Board (@WorkersBoard) header
Construction Workers Welfare Board (@WorkersBoard) profile picture

Karnataka Building And Other Construction Workers Welfare Board

Dairy Circle, Bengaluru.
Joined September 2019
Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)
ಕಾರ್ಮಿಕರೇ, ವಿದ್ಯುತ್ ಕೆಲಸದ ವೇಳೆ ಬಳಸುವ ಇನ್ಸುಲೇಟಿಂಗ್ ಸೂಟ್ ಹಾಗೂ ರಬ್ಬರ್ ಗ್ಲೌಸ್ ಗಳಿಂದಾಗುವ ಅನುಕೂಲಗಳ ಬಗ್ಗೆ ನಿಮಗೆ ತಿಳಿದಿರಲಿ. ವಿದ್ಯುತ್ ಶಾಕ್ ತಗಲುವ ಅಪಾಯದಿಂದ ಈ ಸುರಕ್ಷತಾ ಪರಿಕರಗಳು ನಿಮ್ಮನ್ನು ಕಾಪಾಡುತ್ತವೆ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
309
ನೀವು ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದಲ್ಲಿ ಮಂಡಳಿಯು ನೀಡುವ ಹಲವು ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214 ಗೆ ಕರೆಮಾಡಿ. #ಶ್ರಮಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
303
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾರ್ಮಿಕ ಅಧಿಕಾರಿಗಳ ಕಚೇರಿ ಆವರಣದಲ್ಲಿ ಮಂಡಳಿಯ ಯೋಜನೆಗಳು, ನೋಂದಾಯಿತ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಪ್ರಚಾರದ ಆಟೋಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #kbocwwb #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೆ
328
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ಕೆಡಿಪಿ ಸಭೆಯಲ್ಲಿ ಮಾನ್ಯ ಶಾಸಕರಾದ ಶ್ರೀ ಸತೀಶ್ ಕೃಷ್ಣ ಸೈಲ್ ಅವರು, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿದರು. ಇದೇ ವೇಳೆ ಮಂಡಳಿಯಿಂದ ನೀಡಲಾಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು. ಈ ವೇಳೆ ತಹಶೀಲ್ದಾರ್‌ ಶ್ರೀ ನಿಶ್ಚಲ್ ನರೋನಾ ಹಾಗೂ ಡಿವೈಎಸ್ ಪಿ. ಶ್ರೀ ಗಿರೀಶ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
2
460
ಕಾರವಾರದಲ್ಲಿನ ಕಾರ್ಮಿಕ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಮಂಡಳಿಯ ವಿವಿಧ ಸೌಲಭ್ಯಗಳ ಕುರಿತು ಕಟ್ಟಡ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಆಟೋಗಳ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
318
ಬಹುಮಹಡಿ ಕಟ್ಟಡಗಳ ನಿರ್ಮಾಣದ ವೇಳೆ ಸುರಕ್ಷತೆಯ ದೃಷ್ಟಿಯಿಂದ ಸೇಫ್ಟಿ ನೆಟ್ ಗಳನ್ನು ಬಳಸಿ. ಸೇಫ್ಟಿ ನೆಟ್ ಗಳು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಸಂಭವಿಸುವ ಅಪಾಯವನ್ನು ತಪ್ಪಿಸಬಲ್ಲವು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
1
377
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯು ಅಪಘಾತ ಪರಿಹಾರ ಸಹಾಯಧನವನ್ನು ನೀಡುತ್ತದೆ. ಫಲಾನುಭವಿ ಅಪಘಾತಕ್ಕೀಡಾದ ದಿನದಿಂದ ಒಂದು ವರ್ಷದ ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
412
ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ, ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #kannadarajyotsava
3
330
ಪೇಂಟಿಂಗ್‌ ಮಾಡುವಾಗ ಸುರಕ್ಷತಾ ಬೆಲ್ಟ್‌ಗಳನ್ನು ತಪ್ಪದೇ ಧರಿಸಬೇಕು. ವಿದ್ಯುತ್‌ ಬೋರ್ಡ್‌, ಸ್ವಿಚ್‌ಗಳ ಬಳಿ ಪೇಂಟಿಂಗ್‌ ಮಾಡುವಾಗ ಜಾಗರೂಕರಾಗಿರಬೇಕು. ಪೇಂಟ್‌ ದೇಹದ ಮೇಲೆ ಬೀಳದಂತೆಯೂ ನೋಡಿಕೊಳ್ಳಿ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
282
ಪರೀಕ್ಷೆಯ ಒತ್ತಡ, ಕೌಟುಂಬಿಕ ಸಮಸ್ಯೆ, ಮಾದಕ ವಸ್ತುಗಳ ವ್ಯಸನದಂತಹ ಸಮಸ್ಯೆಗಳಿಗೆ ಒಳಗಾಗಿದ್ದಲ್ಲಿ ಟೆಲಿ ಮನಸ್ ಸಹಾಯವಾಣಿ 14416 ಅಥವಾ 1800-89-14416 ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
567
ಮಂಡಳಿಯು ನೀಡುವ ಯಾವುದೇ ಸೌಲಭ್ಯಗಳಿಗೆ ಶುಲ್ಕ ಪಾವತಿ ಮಾಡಬೇಕಿಲ್ಲ. ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗದಂತೆ ಎಚ್ಚರಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
2
400
ಕಾರ್ಮಿಕರೇ, ವೆಲ್ಡಿಂಗ್‌ ಹಾಗೂ ಇತರ ಕಣ್ಣಿಗೆ ಅಪಾಯವನ್ನುಂಟು ಮಾಡುವ ಕೆಲಸದ ವೇಳೆ ಸೇಫ್ಟಿ ಕನ್ನಡಕ ಧರಿಸಿ. ಕಣ್ಣಿನ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಿ. ಅವಘಡ ಸಂಭವಿಸಿದ್ದಲ್ಲಿ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಿ. #ಶ್ರಮೇವ_ಜಯತೇ #KBOWWB #ಕಾರ್ಮಿಕ_ಇಲಾಖೆ
1
494
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗಳ ವೇಳೆ ಬರುವ ಧೂಳು ಕಾರ್ಮಿಕರ ಆರೋಗ್ಯಕ್ಕೆ ಹಾನಿಕಾರಕ. ಕೆಲಸದ ಸಮಯದಲ್ಲಿ ಮಾಸ್ಕ್ ಧರಿಸಿ ಧೂಳಿನಿಂದ ಉಂಟಾಗುವ ಅಲರ್ಜಿ, ಉಸಿರಾಟದ ತೊಂದರೆ ಹಾಗೂ ಅಸ್ತಮಾ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
344
ತೈಲ ಮತ್ತು ಅನಿಲ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸುರಕ್ಷತೆಯ ದೃಷ್ಟಿಯಿಂದ ನಿಯಮಿತವಾಗಿ ಗ್ಯಾಸ್ ಡಿಟೆಕ್ಟರ್ ಗಳನ್ನು ಬಳಸಿ. ಅಪಾಯದ ಸೂಚನೆ ಇದ್ದಲ್ಲಿ ಕಾರ್ಮಿಕರಿಗೆ ಮುಂಚಿತವಾಗಿ ಎಚ್ಚರಿಕೆಯನ್ನು ನೀಡುವಲ್ಲಿ ಗ್ಯಾಸ್ ಡಿಟೆಕ್ಟರ್ ಗಳು ಉಪಯುಕ್ತವಾಗಿವೆ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
3
387
ನಾಡಿನ ಸಮಸ್ತ ಜನತೆಗೆ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. #ValmikiJayanthi
14
445
ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಡ್ ಲ್ಯಾಂಪ್ ಧರಿಸುವುದು ಅತ್ಯಂತ ಮುಖ್ಯ. ಇದು ಅಪಘಾತಗಳನ್ನು ತಪ್ಪಿಸಲು ಹಾಗೂ ಕೆಲಸವನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
442
ಉತ್ತರಪ್ರದೇಶ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ಅಗರ್ವಾಲ್‌, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅನುಭವ್‌ ವರ್ಮಾ, ಇಂಡಸ್‌ ಅಕ್ಷನ್‌ನ ಸಲಹೆಗಾರರಾದ ಶ್ರೀ ಧ್ರುವ್‌ ಪ್ರಕಾಶ್‌ ಶುಕ್ಲಾ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಓಬದೇನಹಳ್ಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಿರ್ಮಿಸಲಾಗಿರುವ ಶ್ರಮಿಕ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ, ನೋಂದಾಯಿತ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕದ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #KBOWWB #ಕಾರ್ಮಿಕ_ಇಲಾಖೆ
3
822
ಮೈಸೂರಿನಲ್ಲಿ ನಡೆದ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಕಾರ್ಮಿಕ ಇಲಾಖೆಯ ಸ್ತಬ್ಧಚಿತ್ರ ಗಮನ ಸೆಳೆಯಿತು. ಕಾರ್ಮಿಕ ಇಲಾಖೆ ಹಾಗೂ ಮಂಡಳಿಯ ಯೋಜನೆಗಳು, ಸೌಲಭ್ಯಗಳ ಕುರಿತು ಈ ಸ್ತಬ್ಧಚಿತ್ರದಲ್ಲಿ ವಿವರಿಸಲಾಗಿತ್ತು. #ಶ್ರಮೇವ_ಜಯತೇ #KBOWWB #ಕಾರ್ಮಿಕ_ಇಲಾಖೆ
1
3
455
ಜಮಖಂಡಿ ಮತಕ್ಷೇತ್ರದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಡಳಿಯ ವತಿಯಿಂದ ವಿವಿಧ ಕಿಟ್‌ಗಳನ್ನು ಮಾನ್ಯ ಶಾಸಕರಾದ ಶ್ರೀ ಜಗದೀಶ್‌ ಗುಡಗುಂಟಿ ಅವರು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
1
475