
Official Page of Chitradurga District Police. #ಚಿತ್ರದುರ್ಗ_ಜಿಲ್ಲಾ_ಪೊಲೀಸ್.
Chitradurga, India
Joined December 2018
- Tweets6.9K
- Following383
- Followers3.2K
- Likes202
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಇತ್ತೀಚಿಗೆ ಚಳ್ಳಕೆರೆ BCM Hostel ನಲ್ಲಿ ನಡೆದ ಗಲಾಟೆ ವಿಚಾರದ ಹಿನ್ನಲೆಯಲ್ಲಿ ಚಳ್ಳಕೆರೆ ಪೊಲೀಸ್ ರು Hostel ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಿದರು.
@DgpKarnataka @112chitradurga @KarnatakaCops
1
80
ಇಂದು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಶ್ರೀ ಕನಕದಾಸರ ಜಯಂತಿಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು & ಇನ್ನಿತರೆ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.@DgpKarnataka
58
ಮಹಾನ್ ಸಂತ ಕವಿ ಕನಕದಾಸರು ತಮ್ಮ ಭಕ್ತಿ, ಸಾಹಿತ್ಯ ಹಾಗೂ ಸಮಾನತೆಯ ಸಂದೇಶಗಳ ಮೂಲಕ ಸಮಾಜಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳು, ಚಿಂತನೆಗಳು ಹಾಗೂ ಭಕ್ತಿಯ ಸಂದೇಶ ಸದಾ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
@DgpKarnataka @112chitradurga
41
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಚಳ್ಳಕೆರೆ ಪೊಲೀಸರಿಂದ ಕುರಿ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ, ಆರೋಪಿತರಿಂದ 1,11,000/- ನಗದು ಹಣ, 2,16,000/- ಮೌಲ್ಯದ 18 ಕುರಿಗಳು ಹಾಗೂ ಕುರಿ ಕಳವು ಮಾಡಲು ಬಳಸುತ್ತಿದ್ದ ವಾಹನ ವಶ
@DgpKarnataka @KarnatakaCops
ಹೊಯ್ಸಳ-08 ರ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಡಯಲ್-112, ಪೊಲೀಸ್ ಸಹಾಯವಾಣಿಗಳು, ರಸ್ತೆ ಸುರಕ್ಷತೆ ಹಾಗೂ ಪೊಲೀಸ್ ಕಾನೂನುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ.
@DgpKarnataka @KarnatakaCops @112chitradurga
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯನ್ನು ಹಮ್ಮಿಕೊಂಡಿದ್ದು, ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
@DgpKarnataka 1/2
ಸದರಿ ಸಭೆಯಲ್ಲಿ ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದ ಕಾರ್ಯಗಳ ಪಾಲನಾ ವರದಿಯನ್ನು ಪರಿಶೀಲಿಸಲಾಯಿತು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.
@DgpKarnataka 2/2
ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದು ಕೊಂಡಿದ್ದ ಮೊಬೈಲ್ಗಳನ್ನು CEIR Portal ಮೂಲಕ ಸುಮಾರು 3,10,000 ರೂ ಮೌಲ್ಯದ 16 ಮೊಬೈಲ್ ಪೋನ್ಗಳನ್ನು ಪತ್ತೆಹಚ್ಚಿ ಪಿಐ ತುರುವನೂರು ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ವಾರಸುದಾರರಿಗೆ ಹಿಂತಿರುಗಿಸಿದರು. @DgpKarnataka
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಇಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ ಸಂವಿಧಾನ ದಿನದ ಅಂಗವಾಗಿ ಪೊಲೀಸ್ ಅಧೀಕ್ಷಕರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಸಮಯದಲ್ಲಿ ಪೊಲೀಸ್ ಕಚೇರಿಯ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು & ಲಿಪಿಕ ಸಿಬ್ಬಂದಿಯವರು ಹಾಜರಿದ್ದರು. @DgpKarnataka @112chitradurga @KarnatakaCops
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ನಾಗರಿಕರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರ್ಥ ಮಾಡಿಕೊಂಡಾಗ ಬಲಿಷ್ಠ ರಾಷ್ಟ್ರ ನಿರ್ಮಾಣವಾಗುತ್ತದೆ. ನಾಡಿನ ಸಮಸ್ತ ಜನತೆಗೆ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. @DgpKarnataka @112chitradurga @KarnatakaCops
ಅಕ್ಕಪಡೆಯವರು ಚಿತ್ರದುರ್ಗ ನಗರದ ಸರ್ಕಾರಿ ಫ್ರೌಡಶಾಲೆ ಕೋಟೆ, ಚಿತ್ರದುರ್ಗ ತಾಲ್ಲೂಕು ಮಾದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಳ್ಳಕೆರೆ ತಾಲೂಕು ಕಾಪರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಕ್ಕಪಡೆಯ ಕಾರ್ಯಗಳು, ಪೋಕ್ಸೋ, ಬಾಲ್ಯವಿವಾಹ 1/2 @DgpKarnataka
1
93
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ, ಮೊಬೈಲ್ ಬಳಕೆ, ಸೈಬರ್ ಕ್ರೈಂ, ಸರಗಳ್ಳತನ, ಸಾಮಾಜಿಕ ಜಾಲತಾಣಗಳು ಬಗ್ಗೆ ಮತ್ತು 181, 112, 1930, 1098 ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದರು. 2/2 @DgpKarnataka
11
ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಮಾಲತೇಶ ರವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುವ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು.@DgpKarnataka
2
153
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ರಾಂಪುರ ಪೊಲೀಸರ ಮಿಂಚಿನಕಾರ್ಯಚರಣೆ, ಮೂವರು ಗಾಂಜಾ ಪೆಡ್ಲರ್ಗಳ ಬಂಧನ. @DgpKarnataka @KarnatakaCops @112chitradurga
2
109
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಸದ ಸಂಚಾರ ನಿಯಮಗಳನ್ನು ಪಾಲಿಸಿ
ಅಪಘಾತಗಳಿಂದ ಜೀವವನ್ನು ಉಳಿಸಿ
@DgpKarnataka @KarnatakaCops @112chitradurga
87
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ರಾಂಪುರ ಪೊಲೀಸರ ಮಿಂಚಿನಕಾರ್ಯಚರಣೆ, ಮೂವರು ಗಾಂಜಾ ಪೆಡ್ಲರ್ಗಳ ಬಂಧನ.
@DgpKarnataka @KarnatakaCops
ದಿ: 24.11.2026 ರಂದು ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ನಗರ ಕೃಷ್ಣ ಆಸ್ಪತ್ರೆಯ ಹತ್ತಿರ ನಡೆದ ಸರಗಳ್ಳತನ ಪ್ರಕರಣದ ಘಟನಾ ಸ್ಥಳಕ್ಕೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka @112chitradurga























