ನಾನು retweeted
ಹಂಪಿಯಲ್ಲಿ ಇನ್ನೊಂದು ದೇಗುಲ ದೊರೆತಿದೆ !
Fascinating news from Hampi.
ASI has unearthed a rare paired Vishnu and Shiva temple complex in the dvikuta (twin sanctum) style near the Lotus Mahal.
A major temple discovery after years.
hospet.online/paired-vishnu-…
ನಾನು retweeted
Fascinating news from Hampi.
ASI has unearthed a rare paired Vishnu and Shiva temple complex in the dvikuta (twin sanctum) style near the Lotus Mahal.
A major temple discovery after years.
hospet.online/paired-vishnu-…
ನಾನು retweeted
ಸುದರ್ಶನ್ ರೆಡ್ಡಿ ಅವರ ಫೇಸ್ ಬುಕ್ ಬರಹ:
ತಿರುಪತಿಯ 'ಶ್ರೀ ವೆಂಕಟೇಶ್ವರ ಓರಿಯೆಂಟಲ್ ರಿಸರ್ಚ್ ಇನ್ಸಟಿಟ್ಯೂಟ್' ರವರು ಸಂಪಾದಿಸಿರುವ ತಾಳೆಗರಿಗಳಲ್ಲಿ ದೇವನಹಳ್ಳಿ ಮದನಗೋಪಾಲ ಸ್ವಾಮಿಯವರ ಮೇಲೆ ಬರೆದ ಒಂದು ಕೀರ್ತನೆ ಇದೆ...
(SVORI 2529 ಗರಿ 40ಎ ಇಂದ 41ಎ).
ಆವತಿ ನಾಡಪ್ರಭುಗಳ ವಂಶೀಕರಲ್ಲಿ ಯಾರೋ ಒಬ್ಬರು ಈ ಕೃತಿ ರಚಿಸಿರಬಹುದು ಎಂದು ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ.
ಸಂಪಾದಿಸಿದವರು ತೆಲುಗು ಗೀತರಚನಕಾರ #ವೇಟೂರಿಸುಂದರರಾಮಮೂರ್ತಿಯವರ ದೊಡ್ಡಪ್ಪನ ಮಗ #ವೇಟೂರಿಆನಂದಮೂರ್ತಿ
==================================
ದೇವನಹಳ್ಳಿ ಗೋಪಾಲಸ್ವಾಮಿ ದೇವಾಲಯ ವಿಜಯನಗರ ಸಾಮಂತರಾದ ಆವತಿನಾಡಪ್ರಭುಗಳಿಂದ ನಿರ್ಮಾಣವಾಗಿರುವಂತಾದ್ದು
==================================
ರಾಗ:ತೋಡಿ
ಪಲ್ಲವಿ: ಓ ವನಿತಾ! ನೀವಲಿಗೇದಿ ವಾನಿತೋ - ಉಚಿತಮುಗಾದು ನೇಡೆಂತೈನಾನು
ದೇವಣ್ಣಪಲ್ಲೆ ಕೃಷ್ಣುನಿರಾತಿರಿ - ತೇಲಿಂಚಿ ಲೋಜೇಸುಕೋವಾಲೆನಂತೇ
ಚರಣ1: ಪನಿಲೇದಾ ಮಗವಾರಿ ಮಾಟಲು ವೆದುಳ್ಳ-ಪಂದಿರಿ ಚಕ್ಕನ ಯನಗ ವಿನವೇ
ಕನಿಗಾನಕ ವಾಡೇಂದೈನಾ ದಿರಿಗಿತೇ - ಕನ್ನುಲಾ ಬೆದಿರಿಂಚುಕೋವಾಲೆನಿಂತೇ //ಓ//
ಚರಣ2 : ವಾರಿಜಮುಖಿರೋ ವಿಭುಡು ತುಮ್ಮೆದ - ವಂಟಿವಾಡು ದಂಡಿಂಪ ವಶಮೇ
ಮಾರುಕೇಳಿಲೋನ ಲಾಲಿಂಚೀ ಪಲು - ಮಾರು ಸೊಕ್ಕಿಂಚುಟೇ ಜಾಣತನಮು //ಓ//
ಚರಣ3: ಪಲುಮಾರು ಗೋಪಾಲ ಸ್ವಾಮೈನ ದೇವಣ್ಣ - ಪಲ್ಲೆ ಕೃಷ್ಣುಡು ನಿನ್ನಟಿ ವೇಳ
ಚಲರೇಗಿ ಪರವಶಮೈ ದಾನಿ ಪೇರ - ಬಿಲಿಚೇನಂಟಾ (ನೇಡು) ತಲುಪು ವೆನಕಾ //ಓ//
------------------------------------------------------
ಕನ್ನಡದಲ್ಲಿ ಹೀಗೆ ಇರಬಹುದು:
ಪಲ್ಲವಿ: "ಓ ವನಿತೆಯೇ ನೀನು ಅವನೊಂದಿಗೆ ಕೋಪಿಸಿಕೊಳ್ಳೋದು ಉಚಿತವಲ್ಲ, ಇಂದು ಎಷ್ಟಾದರೂ ದೇವನಹಳ್ಳಿ ಕೃಷ್ಣನ ರಾತ್ರಿ, ಉಬ್ಬಿಸಿ ವಶ ಮಾಡಿಕೊಳ್ಳಬೇಕು ಅಷ್ಟೇ.
ಚರಣ1: ಕೇಳಲಿಲ್ಲವಾ ಗಂಡಸರ ಮಾತುಗಳು ಬಿದಿರಿನ ಚಪ್ಪರ , ಗಮನವಿಟ್ಟು ಕೇಳು ನೋಡಿ ನೋಡದ ಹಾಗೆ ಅವನೇನಾದರೂ ತಿರುಗಿದರೆ ಕಣ್ಣಿನಿಂದ ಬೆದರಿಸಿ ಕೊಳ್ಳಬೇಕಷ್ಟೆ.
ಚರಣ2: ವಾರಿಜಮುಖಿಯೇ ಪ್ರಭುವು ದುಂಬಿಯಂತವನು ದಂಡಿಸಲು ಆಗುವುದೇ? ಸರಸದಲ್ಲಿ ಲಾಲಿಸಿ ಹಲವು ಸಲ ಉಬ್ಬಿಸುವುದೇ ಜಾಣತನ.
ಚರಣ3: ಹಲವು ಸಲ ಗೋಪಾಲಸ್ವಾಮಿಯಾದ ದೇವನಹಳ್ಳಿಯ ಕೃಷ್ಣನು ನಿನ್ನೆಯ ವೇಳೆ ಮೈಮರೆತು ಪರವಶನಾಗಿ ಅವಳ ಹೆಸರ ಕರೆದನಂತೆ-(ಇಂದು) ಬಾಗಿಲ ಹಿಂದೆ.
. cc @acharya2
ನಾನು retweeted
A book compiled and edited by me.
Long ago, Sage Parāśara put into Sanskrit verse what a farmer needs to know through the year: how the coming rain was reckoned, how to care for the cattle, how to make the plough, and when to keep the seed, sow, transplant, harvest and fill the granary.
Here are all 243 verses of the Kṛṣi-Parāśara, each with a plain-English meaning and a picture. Follow Rāmaṇṇa, Lakṣmamma and little Gaurī through their farming year, with the sage as their guide.
For young readers and old, for farmers and the curious: an ancient book of the land, made easy to read.
Pre-orders are open. 30% off on all pre-orders. The book ships on November 1st, Rajyotsava day:
sampada.net/krushi-parashara…
ನಾನು retweeted
(ತ್ರಿಪದಿ)
ಪದಗsಳ ನೀ ಕೊಡದೆ ನಾನೇನು ಬರೆದೇನು?
ಪದಗಳಿಗೆ ಮಣಿಯುತ್ತ ಕುಳಿತೇನು! ಶಾರsದೆ
ತೊದಲು ಮಾತುಗಳ ತಿದ್ದಮ್ಮ!
(ಮಾತ್ರಾಮಲ್ಲಿಕಾಮಾಲೆ)
ಮಂಜು ಚಂದಿರ ಮಲ್ಲಿಗೆಯವೋಲ್ ಬೆಳ್ಪು ಬಣ್ಣದ ಸರಸತಿ
ಶುಭ್ರವಸ್ತ್ರವನುಟ್ಟು ಪೊಳೆಯುವ ವೀಣೆದಂಡಿಯ ಪಿಡಿದೆಯೆ |
ಬೊಮ್ಮ ಹರಿಹರರಿಂದ ಪೂಜೆಯಗೊಳುತ ಬೆಳ್ದಾವರೆಯೊಳು
ಕುಳಿತ ದೇವಿಯೆ! ಕಾಯಬೇಕೌ ಉಳಿಸದೆನ್ನಯ ಅಲಸಿಕೆ |
(ಚೌಪದಿ)
ಅಚ್ಚರಿಯ ತರುವುದೀ ಸರಸತಿಯ ಭಂಡಾರ
ಎಲ್ಲಿಯೂ ಇರದಂಥ ಬಲುಹುಳ್ಳದು;
ಬಳಸಿದಷ್ಟೂ ತಾನು ತುಂಬುತ್ತ ಹೋಗುವುದು
ಬಳಸದಿರೆ ಕುಗ್ಗಿ ಹೋಗುವುದು ನಶಿಸಿ!
(ಭಾಮಿನಿ ಷಟ್ಪದಿ)
ಹೊಳೆವ ಚಂದ್ರನ ಮುಡಿದ ದೇವಿಯೆ
ಇಳೆಯ ಜನರನು ಗಾನ ಸುಧೆಯಲಿ
ಮುಳುಗಿಸೌ ಜನನಿಯೇ ಶಾರದೆ ಶೃಂಗಗಿರಿ ನಿಲಯೇ |
ಬಿಳಿಯ ಮುತ್ತಿನ ಸರದ ಕೈಯೊಳು
ಗಿಳಿಯು ಸರಸದಿ ಮೆರೆದಿಹುದೆ! ನೀ
ತಿಳಿವ ಮಳೆಯನು ಕರೆದು ಕರಗಿಸು ಮನದ ಜಾಡ್ಯಗಳ ||
(ಭಾಮಿನಿ ಷಟ್ಪದಿ)
ಹೊಳೆವ ವರವೀಣೆಯನು ನುಡಿಸುತ
ಇಳೆಯ ಜನರನು ಗಾನ ಸುಧೆಯಲಿ
ಮುಳುಗಿಸಿಹೆಯೌ ತಾಯೆ ಶಾರದೆ ಹರಿಯ ಸೊಸೆ ಸರಸೇ |
ಬಿಳಿಯ ಮುತ್ತಿನ ಸರದ ಜೊತೆ ಮಾ
ದಳದ ಫಲ ಮೆರೆದಿಹವು ಕೈಯಲಿ
ತಿಳಿವ ಮಳೆಗರೆಯುತಲಿ ಕರಗಿಸು ಮನದ ಜಾಡ್ಯವನು ||
(ಮಧ್ಯಾವರ್ತ ಗತಿ?)
ತುಂಗೆ ದಡದಲ್ಲಿ ಶೃಂಗಗಿರಿಯಲ್ಲಿ ನಿಂತ ವಾಣಿ! ವರದೇ!
ಮಂಗಳಾಂಗಿಯೇ! ಚಂದಿರನಮುಡಿದ ಶರಚ್ಚಂದ್ರವದನೇ!
ಹಿಂಗಿಸಮ್ಮ ನೀ ಭವದ ಕತ್ತಲೆಯ ಜ್ಞಾನ ಜ್ಯೋತಿ ಬೆಳಗಿ
ಭಂಗಗೊಳಿಸಮ್ಮ ಮನದ ಅಲಸಿಕೆಯ ತಿಳಿವ ಕರುಣಿಸುತಲಿ!
(ಚೌಪದಿ)
ಒಂದುಡುಗೆಗನುರೂಪವಾದೊಡವೆಯ ನಟಿ ಮ-
ತ್ತೊಂದುಡುಗೆಗೂ ಹೊಂದಿಸುತ ಮೆಚ್ಚುವಂತೆ
ಚಂದವಾಗಿಹ ಕಬ್ಬವನ್ನು ನುಡಿಮಾರ್ಪಡಿಸೆ
ಅಂದ ಮೆಚ್ಚುತ ಭಾರತಿಯು ಕಿವಿಯಲಿಡಲಿ!
(ರಗಳೆ)
ಮನಸಿನಾಲಸ್ಯಕ್ಕೆ ಅಂಕುಶವೆ ನೀನಾಗು
ಮನವಲೆಯದಿರಲೆಂದು ತಡೆವ ಪಾಶ
ಮನವೊಂದೆ ಸ್ಥಾಯಿಯಲಿ ನಡೆಯಲಿಕೆ ಹರಸು ನೀ
ಮಣಿವೀಣೆಯಲಿ ಗಾನಸುಧೆಯನುಣಿಸಿ
ಹಣ್ಣಾಗು ಮಾಗು ಅನುಭವವನ್ನು ಗಳಿಸೆಂದು
ಮುನ್ನ ಧಾರೆಯಲೆರೆಯೆ ನಿನ್ನ ಕರುಣವನು
ಚೆನ್ನೆ! ಶಾರದೆ ನಿನ್ನ ದಿವ್ಯಾಕ್ಷಮಾಲೆಯ-
ನ್ನೆಣಿಸುತ್ತಲೀ ಜಗಕೆ ದಾರಿ ತೋರಮ್ಮ !
ಕಟ್ಟಿರುವ ಅಲಸಿಕೆಕೆ ಅಂಕುಶವೆ ನೀನಾಗು
ಎನ್ನ ಮನವನ್ನಂಕೆಗೈವ ಪಾಶ
ಹೊತ್ತಿಗೆಯಲಕ್ಕರದ ಕೃಪೆಯನ್ನು ತೋರುತಲಿ
ಮುತ್ತಾಗು ಕೊಂಕಿರದೆಯೆಂದು ಹರಸು
ಹಣ್ಣಾಗು ಮಾಗು ಅನುಭವವನ್ನು ಗಳಿಸೆಂದು
ಮುನ್ನ ಧಾರೆಯಲೆರೆಯೆ ನಿನ್ನ ಕರುಣವನು
ಚೆನ್ನೆ! ಸರಸತಿ ನೀನು ಲೋಕೇಶನೊಡಮೂಡಿ
ಹುಟ್ಟಿ ಬಂದಿಹ ತಾಯೆ! ನಮ್ಮ ಕಾಯ್ಗೆ
(ಸರಸ್ವತಿ ಪೂಜೆಯ ದಿನ ಹೊಸದಾಗಿ ಹೆಚ್ಚಾಗಿ ಏನನ್ನೂ ಬರೆಯದಿದ್ದರಿಂದ ಒಂದು ತ್ರಿಪದಿ ಮಾತ್ರ ಸೇರಿಸಿ, ಹಿಂದೆಯೇ ಬರೆದಿದ್ದ ಕೆಲವು ಸರಸ್ವತಿಯ ಸ್ತುತಿಗಳನ್ನು ಹಂಚಿಕೊಂಡಿದ್ದೇನೆ. ಇದರಲ್ಲಿ ಕೆಲವು ಅನುವಾದಗಳೂ ಸೇರಿವೆ.
ಅತಿ ಸುಂದರವಾದ ಶೃಂಗೇರಿ ಶಾರದಾದೇವಿಯ ಚಿತ್ರ ಮಿತ್ರ .@acharya2 ಅವರ ಕಲೆಗಾರಿಕೆ 🙏😍 )
ಇವತ್ತು ಈ ಗಾದೆಯನ್ನು ಉದಾಹರಿಸಿ ಹೇಳುವುದಾಯಿತು :)
"ಪಡೆ ನೋಡಲ್ ಬಂದವರಂ ಗುಡಿವೊರಿಸಿದರೆಂಬುದಾಯ್ತು…"
#ಪಂಪ #ವಿಕ್ರಮಾರ್ಜುನ_ವಿಜಯ
Replying to @acharya2
"ಪಿಡಿದು ಅಡಸಿ ತಿನಲ್ ಬಂದಿರ್ದ ಎಡೆಯೊಳ್, ನಿನಗಾಗಿ ಮದನನ್ ಎನ್ನನೆ ತಿನೆ… ಕೇಳ್, 'ಪಡೆ ನೋಡಲ್ ಬಂದವರಂ ಗುಡಿವೊರಿಸಿದರ್ ಎಂಬುದಾಯ್ತು ನಿನ್ನ-ಎನ್ನ ಎಡೆಯೊಳ್"
ನಾನು retweeted
ಈ ರಾಜ್ಯೋತ್ಸವವನ್ನು ನಮ್ಮ ನೆಲದ ಜ್ಞಾನದೊಂದಿಗೆ ಆಚರಿಸೋಣ 💛❤️
ಮಳೆ, ಬೀಜ, ಬಿತ್ತನೆ, ಕೊಯ್ಲು — ಪ್ರಾಚೀನ "ಕೃಷಿ ಪರಾಶರ" ಈಗ ಸರಳ ಕನ್ನಡದಲ್ಲಿ, ಚಿತ್ರಗಳೊಂದಿಗೆ. ನವೆಂಬರ್ ೧ರಂದು ಬಿಡುಗಡೆ; ಮುಂಗಡಕ್ಕೆ ೩೦% ರಿಯಾಯಿತಿ.
ನಿಮ್ಮ ಹಿರಿಯರು ಮಳೆಯ ನಕ್ಷತ್ರಗಳನ್ನು ಗುರುತಿಸಿ ಏನು ಹೇಳುತ್ತಿದ್ದರು? ತಿಳಿಸಿ.
sampada.net/krushi-parashara
Looks like @CSYogananda 's acc is hacked. Please inform him, if any of you have his contact
ನಾನು retweeted
ಮಡಿ ಎಂದರೆ ಆವರ್ತಿಸುವುದು ಎಂಬ ಅರ್ಥದಲ್ಲಿ, ಅವನು ಒಮ್ಮೆ ನುಡಿದರೆ ಬೆಟ್ಟವು ನೂರ್ಮಡಿಯಾಗಿ ನುಡಿಯಿತು, ಎಂಬ ವಾಕ್ಯ ಜ್ಣಾಪಕಕ್ಕೆ ಬರುತ್ತದೆ. ಹಾಗಾಗಿ ಮೊದಲ ಪುಲಿಕೇಶಿ, ಇಮ್ಮಡಿ ಪುಲಿಕೇಶಿ, ಮುಮ್ಮಡಿ ಪುಲಿಕೇಶಿ... ಇಲ್ಲಿರುವುದು ಪಂಡಿತ ಕವಲಿಯವರ ಕಸ್ತೂರೀ ಕೋಶದ ಪುಟ
ನಾನು retweeted
ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವೆಡೆ ನೀರು ಬರುತ್ತಲೇ ಇಲ್ಲ. ಏನು ಮಾಡುವುದು?
ಬೋರ್ವೆಲ್ಲುಗಳಲ್ಲಿ ನೀರಿನ ಮಟ್ಟ ಉತ್ತಮಗೊಳಿಸಲು ಇಗೋ ಸುಲಭದ ಒಂದು ದಾರಿ - ಲಾವಂಚ ನೆಡಿ! ಕೇಂದ್ರ ಸರಕಾರ ಕಳೆದ ಹಲವು ವರ್ಷಗಳಿಂದ ಈ ಗಿಡವನ್ನು ರೈತರಿಗೆ ಉಚಿತವಾಗಿ ಹಂಚುತ್ತಲಿದೆ! ಹೆಚ್ಚಿನ ಮಾಹಿತಿ:
sampada.net/s/erU
























